ಮೊಂಟೆಪದವು: ಕಿರು ಆರೋಗ್ಯ ಕೇಂದ್ರ, ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣ ಗೋಡೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ
ಉಳ್ಳಾಲ: ಯಾವುದೇ ಅಭಿವೃದ್ಧಿ ಕಾಮಗಾರಿಗಳು ಯಶಸ್ವಿಯಾಗಿ ನಡೆಯಬೇಕಾದರೆ ಆ ಭಾಗದ ಜನರ ಸಹಕಾರ ಅಗತ್ಯ. ನರಿಂಗಾನ ಮೊಂಟೆಪದವು ಭಾಗದಲ್ಲಿ ಈಗಾಗಲೇ ಜನರ ಬೇಡಿಕೆಗನುಗುಣವಾಗಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ. ಇದೀಗ ಕಿರು ಆರೋಗ್ಯ ಕೇಂದ್ರ ಹಾಗೂ ಶಾಲಾ ಮಕ್ಕಳ ಹಿತದೃಷ್ಟಿಯಿಂದ ಶಾಲೆಯ ಆವರಣ ಗೋಡೆಯ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದ್ದು ಆದಷ್ಟು ಶೀಘ್ರವಾಗಿ ಕಾಮಗಾರಿ ಪೂರ್ಣಗೊಳ್ಳಲಿ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.

ಮೊಂಟೆಪದವು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಆವರಣ ಗೋಡೆ ನಿರ್ಮಾಣಕ್ಕೆ ಶಿಲಾನ್ಯಾಸ ಹಾಗೂ ಮೊಂಟೆಪದವಿನಲ್ಲಿ ಕಿರು ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಸೋಮವಾರ ಅವರು ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.
ಮೊಂಟೆಪದವು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ಜಲೀಲ್ ಮೋಂಟುಗೋಳಿ, ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹನೀಫ್ ಚಂದಹಿತ್ಲು, ಕರ್ನಾಟಕ ಪಬ್ಲಿಕ್ ಸ್ಕೂಲ್ ವೈಸ್ ಪ್ರಿನ್ಸಿಪಾಲ್ ಸಂತೋಷ್, ಉಪನ್ಯಾಸಕಿ ಹರಿಣಾಕ್ಷಿ, ಪ್ರಮೀಳಾ, ನರಿಂಗಾನ ಗ್ರಾ.ಪಂ. ಅಧ್ಯಕ್ಷೆ ಶೈಲಜಾ ಶೆಟ್ಟಿ, ಉಪಾಧ್ಯಕ್ಷ ನವಾಝ್ ಕಲ್ಲರಕೋಡಿ, ಸದಸ್ಯರುಗಳಾದ ಫಯಾಝ್, ಗಿರಿಜಾ, ಶೇಖಬ್ಬ, ಸುಂದರ ಪೂಜಾರಿ, ಸಲೀಂ, ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಅಬೂಬಕರ್ ನರಿಂಗಾನ, ಬಶೀರ್ ಉಂಬುದ, ಎಸ್ ಡಿಎಂಸಿ ಮಾಜಿ ಅಧ್ಯಕ್ಷ ಆಲಿಕುಂಞಿ ಮೋಂಟುಗೋಳಿ, ಬಾಳೆಪುಣಿ ಗ್ರಾ.ಪಂ ಸದಸ್ಯ ಹನೀಫ್ , ಸಲಾಂ ಎಂ.ಹೆಚ್ ಉಪಸ್ಥಿತರಿದ್ದರು.
ಸದಸ್ಯ ಅಬ್ದುಲ್ ರಹಿಮಾನ್ ಚಂದಹಿತ್ಲು ಸ್ವಾಗತಿಸಿದರು.