ಬಂಟ್ವಾಳ : ಬಿ.ಸಿ.ರೋಡಿನಲ್ಲಿ ನಿರ್ಮಾಣಗೊಂಡಿರುವ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರ ನೂತನ ಅಂಬೇಡ್ಕರ್ ಭವನವನ್ನು ಶಿಷ್ಟಾಚಾರದಂತೆ ಮತ್ತು ವಿಜೃಂಭಣೆಯಾಗಿ ಲೋಕಾರ್ಪಣೆಗೊಳಿಸುವಂತೆ ದಲಿತ ಮುಖಂಡರು‌ ಆಗ್ರಹಿಸಿದ್ದಾರೆ.

ಭಾನುವಾರ ನಗರ ಪೊಲೀಸ್ ಠಾಣೆಯಲ್ಲಿ ಬಂಟ್ವಾಳ ನಗರ ಮತ್ತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗಳ ಜಂಟಿ  ಆಶ್ರಯದಲ್ಲಿ ಭಾನುವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ  ಕುಂದು ಕೊರತೆ ಸಭೆಯಲ್ಲಿ ಬಂಟ್ವಾಳ ತಾಲೂಕು ಭಾರತ ರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ಸತೀಶ್ ಅರಳ ಆಗ್ರಹಿಸಿದ್ದಾರೆ.

2017 ಜ. 17 ರಂದು ಬಂಟ್ವಾಳ ತಾಲೂಕು ಮಟ್ಟದ ಅಂಬೇಡ್ಕರ್ ಭವನ ಶಿಲಾನ್ಯಾಸ ಮಾಡಲಾಗಿದ್ದು,ಸೆ. 20 ರಂದು ತರಾತುರಿಯಾಗಿ ಮತ್ತು  ಕಾಟಚಾರಕ್ಕೆ ಎಂಬಂತೆ ಇದರ ಉದ್ಘಾಟನೆಗೆ ಸಿದ್ದತೆ ನಡೆಸಲಾಗಿದೆ.ಇಡೀ ಜಗತ್ತೇ ಗೌರವಿಸಲ್ಪಡುವ ಭಾರತದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರ ನೂತನ ಅಂಬೇಡ್ಕರ್ ಭವನವನ್ನು  ಕ್ರಮಬದ್ಧವಾಗಿ ಶಿಷ್ಟಾಚಾರವಾಗಿ ಲೋಕಾರ್ಪಣೆ ಮಾಡಬೇಕು ಮತ್ತು  ನಿಗದಿ ಪಡಿಸಿರುವ ದಿನಾಂಕವನ್ನು ಮುಂದೂಡುವಂತೆ  ಮನವಿಯನ್ನು ಮಾಡಿದರು.

ಸಭೆಯಲ್ಲಿ ದಲಿತ ಮುಖಂಡರಾದ ಶ್ರೀನಿವಾಸ್ ಅರ್ಬಿಗುಡ್ಡೆ,ಸಂತೋಷ್ ಭಂಡಾರಿ ಬೆಟ್ಟು,ಸರೋಜಾ ಸರಪಾಡಿ,ಉಮೇಶ್ ಕೃಷ್ಣಾಪುರ, ಚಂದ್ರಹಾಸ್ ಅರ್ಬಿಗುಡ್ಡೆ,ಪ್ರಿತಿರಾಜ್ ದ್ರಾವಿಡ್ನಾ,ರಾಯಣ ಬೊಂಡಾಲ,ಸತೀಶ್ ಏರ್ಯ,ರಾಮ ಚೆಂಡ್ತಿಮಾರ್,ಪ್ರೇಮ್ ರಾಜ್ ದ್ರಾವಿಡ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *