Published On: Mon, Sep 18th, 2023

ಮಾದಕ ವಸ್ತುಗಳ ದುಬ೯ಳಕೆ ತಡೆಗಟ್ಟುವಿಕೆ ಮತ್ತು ನಿವ೯ಹಣೆ ಕುರಿತ ಕಾರ್ಯಾಗಾರ

ಬಂಟ್ವಾಳ: ದುಶ್ಚಟಗಳಿಗೆ ವ್ಯಸನರಾಗಿ ಅದೆಷ್ಟೋ ಜೀವಗಳು ಬಲಿಯಾಗಿವೆ,ದುಶ್ಚಟಗಳಿಂದ  ದೂರವಿರಲು ಹಾಗೂ ಅವುಗಳ ದಾಸರಾಗದಂತೆ ತನ್ನ ಎಳವೆಯಲ್ಲೇ ಈ ಕುರಿತಾದ ಉತ್ತಮ ಸಂಸ್ಕಾರಯುತವಾದ ಗುಣಮಟ್ಟದ ಕಲಿಕೆ,ಉತ್ತಮ ಗೆಳೆತನ ಇದಕ್ಕೆ ಕಾರಣವಾಗಿದೆ ಎಂದು ವಿಟ್ಲ ಆರಕ್ಷಕ ಠಾಣೆಯ  ವೀರಕಂಬ ಗ್ರಾಮ ಬೀಟ್ ಪೊಲೀಸ್ ಕಾನ್ಸ್ ಟೇಬಲ್ ಮನೋಜ್ ಹೇಳಿದ್ದಾರೆ.

ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮದ ಮಜಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಾದಕ ವಸ್ತುಗಳ ದುಬ೯ಳಕೆ ತಡೆಗಟ್ಟುವಿಕೆ ಮತ್ತು ನಿವ೯ಹಣೆ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿ ಪರಿಸರದಲ್ಲಿ ವ್ಯಸನಕ್ಕೆ ಬಲಿಯಾದ ಜನರ ಬಗ್ಗೆ ಕಾಳಜಿ ವಹಿಸಿ ಅವರನ್ನು ಸರಿ ದಾರಿಗೆ ತರಲು ನಿಧಿ೯ಷ್ಟ ಸಂಸ್ಥೆಗಳಿಗೆ ದೂರು ನೀಡಬೇಕು, ಶಾಲಾ ಪರಿಸರ ಮತ್ತು ಮನೆಯಲ್ಲಿ ಈ ಬಗ್ಗೆ ಕಂಡು ಬಂದಾಗ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ವೇದಿಕೆಯಲ್ಲಿ ಕಲ್ಲಡ್ಕ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ  ಜ್ಯೋತಿ,ಮುಖ್ಯ ಶಿಕ್ಷಕಿ  ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು,ಮಕ್ಕಳು ಉಪಸ್ಥಿತರಿದ್ದರು.
ಮಾಹಿತಿ ಕಾಯಾ೯ಗಾರದ ಬಳಿಕ  ವಿದ್ಯಾಥಿ೯ಗಳು ಮಾದಕ ವ್ಯಸನದ ಬಗ್ಗೆ ಪ್ರಹಸನ ನೀಡಿದರು.
ಶಿಕ್ಷಕಿ ಸಂಗೀತ ಶರ್ಮ ಪಿ. ಜಿ. ಸ್ವಾಗತಿಸಿ,ವಂದಿಸಿದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter