ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘಕ್ಕೆ ೪.೦೦ ಕೋ. ರೂ.ವಿಗೂ ಅಧಿಕ ಲಾಭ: ಸುರೇಶ್ ಕುಲಾಲ್
ಬಂಟ್ವಾಳ: ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘವು ೨೦೨೨-೨೩ನೇ ಸಾಲಿನಲ್ಲಿ 808.14 ಕೋಟಿ ರೂ.ವ್ಯವಹಾರ ನಡೆಸಿ ೪.೦೦ ಕೋಟಿ ರೂ.ವಿಗೂ ಅಧಿಕ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಸುರೇಶ ಕುಲಾಲ್ ತಿಳಿಸಿದ್ದಾರೆ.ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಭಾನುವಾರ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸದಸ್ಯರಿಗೆ ಶೇ.17 ಡಿವಿಡೆಂಡ್ ನ್ನು ಘೋಷಿಸಿದರು.
ಸಂಘದಲ್ಲಿ ೭.೭೦ ಕೋಟಿ ರೂ.ಪಾಲು ಬಂಡವಾಳ,೧೯೭.೬೯ ಕೋಟಿ ರೂ.ಠೇವಣಾತಿಗಳು, ೧೩.೧೪ ಕೋಟಿ ರೂ.ನಿಧಿಗಳನ್ನು ಹೊಂದಿದೆ. ಸಾಲ ವಸೂಲಾತಿಯಲ್ಲು ಶೇ. ೯೫.೦೬ ಆಗಿದೆ,ಸಂಘದ ದುಡಿಯುವ ಬಂಡವಾಳ ರೂ. ೨೨೦.೩೪ ಕೋ.ರೂ.ಆಗಿದ್ದು, ಅಡಿಟ್ ವರ್ಗೀಕರಣದಲ್ಲಿ ‘ಎ’ ತರಗತಿ ಪಡೆದಿದೆ ಎಂದರು.
ಉಪಾಧ್ಯಕ್ಷ ಪದ್ಮನಾಭ ವಿ,ನಿರ್ದೇಶಕರುಗಳಾದ ವಿಶ್ವನಾಥ ಕೆ. ಬಿ,ಅರುಣ್ ಕುಮಾರ್,ಜನಾರ್ಧನ ಕುಲಾಲ್,ಬಿ. ರಮೇಶ್ ಸಾಲ್ಯಾನ್,ಎಂ.ವಾಮನ ಟೈಲರ್,ಸತೀಶ,ಸುರೇಶ್ ಎನ್,ರಮೇಶ್ ಸಾಲ್ಯಾನ್,ನಾಗೇಶ್ ಬಿ,ವಿ. ವಿಜಯ್ ಕುಮಾರ್,ಎಮ್. ಕೆ ಗಣೇಶ್ ಸಮಗಾರ,ಜಗನ್ನಿವಾಸ ಗೌಡ,ಜಯಂತಿ,ವಿದ್ಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿರ್ದೇಶಕರಾದ ಬಿ. ರಮೇಶ್ ಸಾಲ್ಯಾನ್ ಸ್ವಾಗತಿಸಿದರು,ಸಂಘದ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಮೋಹನ್ ಎಮ್. ಕೆ. ಅವರು ವಾರ್ಷಿಕ ವರದಿಯನ್ನು ವಾಚಿಸಿದರು,ಪ್ರಧಾನ ವ್ಯವಸ್ಥಾಪಕರಾದ ಭೋಜ ಮೂಲ್ಯ ಅವರು ಲೆಕ್ಕ ಪತ್ರಗಳನ್ನು ಮಂಡಿಸಿದರು. ವ್ಯವಸ್ಥಾಪಕರಾದ ವಿನೋದ್ ಕುಮಾರ್ ವಂದಿಸಿದರು.