ಯಾವುದೇ ಕಾರಣಕ್ಕೂ ಶ್ರದ್ಧಾಕೇಂದ್ರಗಳ ಅವಹೇಳನ ಮಾಡದಿರಿ: ಮಾಣಿಲ ಶ್ರೀ
ಬಂಟ್ವಾಳ: ಯಾವುದೇ ಕಾರಣಕ್ಕೂ ಶ್ರದ್ಧಾಕೇಂದ್ರಗಳ ಅವಹೇಳನ ಮಾಡದಿರಿ,ಮಧ್ಯವ್ಯಸನದಿಂದ ಮುಕ್ತರಾಗಿ ಹೊಸ ಜೀವನ ಕಟ್ಟಿಕೊಳ್ಳಿ, ನಾಯಕತ್ವ ಗುಣ ಬೆಳೆಸಿಕೊಂಡು ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಗಳಾಗಿ ಬಾಳುವಂತೆ ಶ್ರೀಕ್ಷೇತ್ರ ಶ್ರೀಧಾಮ ಮಾಣಿಲದ ಶ್ರೀ ಮೋಹನ ದಾಸ್ ಸ್ವಾಮೀಜಿ ನುಡಿದರು.
ವಿಟ್ಲಶಾಂತಿನಗರದ ಅಕ್ಷಯ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ವಿಟ್ಲ ತಾಲ್ಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಬೆಳ್ತಂಗಡಿ, ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಬೆಂಗಳೂರು, ತಾಲೂಕು ಜನಜಾಗೃತಿ ವೇದಿಕೆ ಬಂಟ್ವಾಳ, ಮಧ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ವಿಟ್ಲ, ಪಟ್ಟಣ ಪಂಚಾಯತ್ ವಿಟ್ಲ, ಪ್ರಗತಿ ಬಂದು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ವಿಟ್ಲ, ಗೌಡರ ಯಾನೆ ಒಕ್ಕಲಿಗರ ಸಂಘ ಶಾಂತಿನಗರ ವಿಟ್ಲ, ಜಸ್ಟಿಸ್ ಕೆ ಎಸ್ ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ, ರೋಟರಿ ಕ್ಲಬ್ ಬಂಟ್ವಾಳ, ನವಜೀವನ ಸಮಿತಿ ವಿಟ್ಲ, ಹಾಗೂ ಸ್ಥಳಿಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತ ಮತ್ತು ಸಂಶೋಧನಾ ಕೇಂದ್ರ ಲಾಯಿಲಾ ಬೆಳ್ತಂಗಡಿ ಇದರ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ ನಡೆದ 1722 ನೇ ಮಧ್ಯವರ್ಜನ ಶಿಬಿರದ ಸಮರೋಪ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನಗೈದರು.
ಪುತ್ತೂರು ತಾಲೂಕು ಜನಜಾಗೃತಿ ವೇದಿಕೆಯ ಉಪಾಧ್ಯಕ್ಷರಾದ ಅರುಣ್ ಕುಮಾರ್ ಪುತ್ತಿಲ ಮಾತನಾಡಿ ನಮ್ಮ ನಿರ್ಧಾರ ನಮ್ಮ ಕೈಯಲ್ಲಿದೆ ಕೆಟ್ಟ ಹವ್ಯಾಸವನ್ನು ಬಿಟ್ಟು ಹೊಸ ಭವಿಷ್ಯವನ್ನು ರೂಪಿಸಿಕೊಂಡರೆ ಗ್ರಾಮಾಭಿವೃದ್ಧಿ ಯೋಜನೆಯ ವ್ಯಸನಮುಕ್ತ ಸಮಾಜ ನಿರ್ಮಿಸುವ ಉದ್ದೇಶದಿಂದ ಡಾ.ಹೆಗ್ಗಡೆಯವರ ಜನಜಾಗೃತಿ ವೇದಿಕೆಯ ಮಧ್ಯವರ್ಜನ ಶಿಬಿರದ ಮೂಲಕ ಹೊಸ ಜೀವನ ಕಟ್ಟಿಕೊಳ್ಳಲು ಮಾಡಿದ ಶಿಬಿರ ಸಾರ್ಥಕವಾಗುತ್ತೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಧ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಮೋನಪ್ಪ ಗೌಡ ವಹಿಸಿದ್ದರು.
ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಮುಖ್ಯಸ್ಥರಾದ ಬಂಗಾರು ಅರಸ್ ಅರಮನೆ ವಿಟ್ಲ,, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷರಾದ ಪದ್ಮನಾಭ ಶೆಟ್ಟಿ, ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಬಾಳಿಗ, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಜಲಜಾಕ್ಷಿ ಬಿ ಗೌಡ,ಜನಜಾಗೃತಿ ವೇದಿಕೆಯ ವಿಟ್ಲ ವಲಯ ಅಧ್ಯಕ್ಷ ಕೃಷ್ಣಯ್ಯ ಬಲ್ಲಾಳ್, ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್, ಪ್ರಗತಿ ಬಂದು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ನವೀನ್ ಚಂದ್ರ, ಶಿಬಿರದ ಯೋಗ ಶಿಕ್ಷಕರಾದ ಆನಂದ ಶೆಟ್ಟಿ,ಶಿಬಿರದ ವೈದ್ಯಾಧಿಕಾರಿ ಡಾ.ಮನೋಹರ್ ರೈ ,ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಯಸ್,ಜನಜಾಗೃತಿ ವೇದಿಕೆಯ ಕೇಪು ವಲಯ ಅಧ್ಯಕ್ಷ ರಾಧಾಕೃಷ್ಣ ಚಲ್ಲಡ್ಕ,ಬಂಟ್ವಾಳ ರೋಟರಿ ಕ್ಲಬ್ ನ ಮಾಜಿ ಅಧ್ಯಕ್ಷ ಪುಷ್ಪರಾಜ್ ಹೆಗ್ಡೆ , ಜನಜಾಗೃತಿ ವೇದಿಕೆಯ ಅಳಿಕೆ ವಲಯ ಅಧ್ಯಕ್ಷ ಬಾಲಕೃಷ್ಣ ಕಾರಂತ್, ಜನಜಾಗೃತಿ ವೇದಿಕೆ ಕಲ್ಲಡ್ಕ ವಲಯ ಅಧ್ಯಕ್ಷ ಭಟ್ಯಪ್ಪ ಶೆಟ್ಟಿ,ಮುಡಿಪು ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಚಂದ್ರಶೇಖರ್ ಆಳ್ವ, ಯೋಜನೆಯ ಕಲ್ಲಡ್ಕ ವಲಯ ಅಧ್ಯಕ್ಷ ತುಳಸಿ, ವಿಟ್ಲ ವಲಯ ಅಧ್ಯಕ್ಷ, ಪ್ರಮೀಳಾ, ಅಳಿಕೆ ವಲಯ ಅಧ್ಯಕ್ಷ ರಾಜೇಂದ್ರ ರೈ, ಪೆರ್ನೆ ವಲಯ ಅಧ್ಯಕ್ಷ ರಾಬರ್ಟ್ ಫೆರ್ನಾಂಡಿಸ್,ಶಿಬಿರಾಧಿಕಾರಿ ದೇವಿ ಪ್ರಸಾದ್ ಮೊದಲಾದವರು ವೇದಿಕೆಯಲ್ಲಿದ್ದರು.
ವಿಟ್ಲ ತಾಲೂಕು ಯೋಜನಾಧಿಕಾರಿ ಚೆನ್ನಪ್ಪ ಗೌಡ, ಸ್ವಾಗತಿಸಿ, ಸಾಲೆತ್ತೂರು ವಲಯ ಮೇಲ್ವಿಚಾರಕಿ ಮೋಹಿನಿ ವಂದಿಸಿದರು ಕೇಪು ವಲಯ ಮೇಲ್ವಿಚಾರಕ ಜಗದೀಶ್ ಹಾಗೂ ಮುಡಿಪು ವಲಯ ಮೇಲ್ವಿಚಾರಕ ಗಂಗಾಧರ್ ಕಾರ್ಯಕ್ರಮ ನಿರೂಪಿಸಿದರು.
ವಿಟ್ಲ ಯೋಜನಾ ಕಚೇರಿ ವ್ಯಾಪ್ತಿಯ ಎಲ್ಲಾ ವಲಯಗಳ ಅಧ್ಯಕ್ಷರು, ಪದಾಧಿಕಾರಿಗಳು, ಒಕ್ಕೂಟ ಅಧ್ಯಕ್ಷ, ಪದಾಧಿಕಾರಿಗಳು, ವಲಯ ಮೇಲ್ವಿಚಾರಕರುಗಳು, ಒಕ್ಕೂಟಗಳ ಸೇವಾ ಪ್ರತಿನಿಧಿಗಳು, ಶೌರ್ಯ ವಿಪತ್ತುನಿರ್ವಹಣಾ ತಂಡದ ಸದಸ್ಯರುಗಳು ಸಹಕರಿಸಿದರು.
ಮಾಣಿಲದಿಂದ ತಾಳಿ ಮಧ್ಯವರ್ಜನ ಶಿಬಿರದಲ್ಲಿ ಭಾಗವಹಿಸಿದವರ ಪೈಕಿ 8 ಮಂದಿ ತಮ್ಮ ದುಶ್ಚಟದಿಂದ ಪತ್ನಿಯರು ಮಾಂಗಲ್ಯ ಸರವನ್ನು ಕಳೆದುಕೊಂಡಿದ್ದು, ಅವರಿಗೆ ಮಾಣಿಲ ಶ್ರೀ ಕ್ಷೇತ್ರದ ವತಿಯಿಂದ ಉಚಿತವಾಗಿ ತಾಳಿ ಒದಗಿಸಿ ಕೊಡುವುದಾಗಿ
ಶ್ರೀ ಮೋಹನದಾಸ್ ಸ್ವಾಮೀಜಿ ಘೋಷಿಸಿದರು.