ಸನಾತನ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘದ ವ್ಯಾಪಾರಸ್ಥರಿಗೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಡಿ.ಸಿ.ಗೆ ಮನವಿ
ಬಂಟ್ವಾಳ: ಕರ್ನಾಟಕ ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆಯಡಿಯಲ್ಲಿ ಬರುವ ದೈವಸ್ಥಾನ, ದೇವಸ್ಥಾನಗಳಲ್ಲಿ ವರ್ಷಂಪ್ರತಿ ನಡೆಯುತ್ತಿರುವಂತ ಜಾತ್ರಾ ಮಹೋತ್ಸವ ಸಹಿತ ವಿವಿಧ ಕಾರ್ಯಕ್ರಮದಲ್ಲಿ ಅನ್ಯಧರ್ಮಿಯರಿಗೆ ಅವಕಾಶ ನೀಡದೆ, ಸನಾತನ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘದ ಎಲ್ಲಾ ಬಡ ವ್ಯಾಪಾರಸ್ಥರು ಮತ್ತು ಬೀದಿ ವ್ಯಾಪಾರಸ್ಥರಿಗೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ದ.ಕ.ಜಿಲ್ಲಾ ಸನಾತನ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘದ ವತಿಯಿಂದಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಮನವಿ ಸಲ್ಲಿಸಿತು.

ಧಾರ್ಮಿಕ ದತ್ತಿ ಇಲಾಖೆಯಡಿಯಲ್ಲಿ ಬರುವ ದೈವಸ್ಥಾನ, ದೇವಸ್ಥಾನಗಳಲ್ಲಿ ವರ್ಷಂಪ್ರತಿ ನಡೆಯುತ್ತಿರುವಂತ ಜಾತ್ರಾ ಮಹೋತ್ಸವ ಮಾತ್ರವಲ್ಲ ಬ್ರಹ್ಮಕಲಶೋತ್ಸವ, ನೇಮೋತ್ಸವ ಸಂದರ್ಭದಲ್ಲಿ ನಡೆಯುವ ಹರಾಜು ಪ್ರಕ್ರಿಯೆಯಲ್ಲು ಮಧ್ಯವರ್ತಿಗಳನ್ನ ಬಳಸಿಕೊಳ್ಳದೆ ನೇರ ಆಡಳಿತ ಮಂಡಳಿಯವರು ಹಾಗು ಧಾರ್ಮಿಕ ಇಲಾಖೆಯ ಅಧಿಕಾರಿಗಳು ಯಾರಿಗೂ ತೊಂದರೆಯಾಗದಂತೆ ಕಡಿಮೆ ದರದಲ್ಲಿ ಸನಾತನ ಹಿಂದೂ ಜಾತ್ರಾ ಬಡ ವ್ಯಾಪಾರಸ್ಥರಿಗೆ ಅವಕಾಶ ಮಾಡಿಕೊಡಬೇಕು ಹಾಗೂ ಕಾರ್ಯಕ್ರಮಗಳು ಮುಗಿದ ನಂತರ ಶುಚಿತ್ವವನ್ನು ಕಾಪಾಡುವಂತ ದೃಷ್ಟಿಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಸ್ವಚ್ಛ ಭಾರತ್ ಕಲ್ಪನೆಯಂತೆ ಸನಾತನ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘದ ಸದಸ್ಯರೆಲ್ಲರೂ ಕೂಡ ಈ ಕಾರ್ಯದಲ್ಲು ದೈವಸ್ಥಾನ, ದೇವಸ್ಥಾನದ ಆಡಳಿತ ಮಂಡಳಿಯೊಂದಿಗೆ ಸಹಕರಿಸುವುದಾಗಿಯು ಮನವಿಯಲ್ಲಿ ತಿಳಿಸಲಾಗಿದೆ.
ಈ ನಿಯೋಗದಲ್ಲಿ ಬಂಟ್ವಾಳತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ದಿನೇಶ್ ಆಮ್ಟೂರು , ಸನಾತನ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಯರಾಮ್ ಶೆಟ್ಟಿಗಾರ್ ಕಲ್ಲಡ್ಕ ,ಗೌರವಾಧ್ಯಕ್ಷರಾದ ರವೀಂದ್ರನಾಥ್ , ಪದಾಧಿಕಾರಿಗಳಾದ ಪ್ರಸಾದ್ ಆರ್ ಶಂಭೂರು, ಧನು ಕುಂಡಡ್ಕ, ರಾಜೇಂದ್ರ ಕೋಟ್ಯಾನ್ ಬೆಳ್ತಂಗಡಿ, ಸತೀಶ್ ಬಂಗೇರ ತುಂಬೆ, ಶಶಿ ಉಜಿರೆ ,ಸತೀಶ್ ಪಾಣೆಮಂಗಳೂರು, ಜಗದೀಶ್ ದಾಸ್ ಮಡಂತ್ಯಾರ್, ಪ್ರದೀಪ್ ದಾಸ್, ಸುರೇಂದ್ರ ಭಂಡಾರಿ ಮೂಲ್ಕಿ, ಚರಣ್ ತೊಕ್ಕೊಟ್ಟು, ಪ್ರಾಣೇಶ್ ಜಪ್ಪಿನಮೊಗರು ಹಾಗು ಸದಸ್ಯರು ಉಪಸ್ಥಿತರಿದ್ದರು