ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿಯ ಗಣೇಶೋತ್ಸವಕ್ಕೆ ತಹಶೀಲ್ದಾರರಿಗೆ ಆಹ್ವಾನ
ಬಂಟ್ವಾಳ: ಹಿಂದೂ ಧಾರ್ಮಿಕ ಸೇವಾ ಸಮಿತಿಯ ಆಶ್ರಯದಲ್ಲಿ ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿಯ ವಠಾರದ ಸಭಾ ಮಂಟಪದಲ್ಲಿ ನಡೆಯಲಿರುವ
44 ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಎಂ ಸತೀಶ್ ಭಂಡಾರಿ ಯವರು ಬಂಟ್ವಾಳ ತಾಲೂಕು ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿಯಾವರಾದ ಎಸ್ ಬಿ ಕೂಡಲಗಿ ಯವರಿಗೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಎಂ ಸತೀಶ್ ಶೆಟ್ಟಿ ಮೊಡಂಕಾಪು, ಜೊತೆ ಕಾರ್ಯದರ್ಶಿ ಭಾಸ್ಕರ ಟೈಲರ್ ಕಾಮಾಜೆ ಹಾಗೂ ಮೋಹನ್ ಬಿ.ಸಿ ರೋಡು
ಉಪಸ್ಥಿತರಿದ್ದರು.