ಥ್ರೋ ಬಾಲ್ ಪಂದ್ಯಾಟ :ಬಾಲವಿಕಾಸದ ಎಲ್ಲಾ ನಾಲ್ಕು ತಂಡಗಳು ಪ್ರಥಮ
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್,ಶಾಲಾ ಶಿಕ್ಷಣ ಇಲಾಖೆ ಬಂಟ್ವಾಳ ತಾಲೂಕು,ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಬಂಟ್ವಾಳ ಮತ್ತು ದ. ಕ. ಜಿ. ಪ. ಉ. ಹಿ. ಪ್ರಾ. ಶಾಲೆ ಅನಂತಾಡಿ ಇದರ ಸಂಯುಕ್ತಾಶ್ರಯದಲ್ಲಿ ಬಂಟ್ವಾಳ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ವಿಭಾಗದ ಥ್ರೋ ಬಾಲ್ ಪಂದ್ಯಾಟವು ಅನಂತಾಡಿ ದ. ಕ. ಜಿ. ಪ. ಉ. ಹಿ. ಪ್ರಾ ಶಾಲೆಯಲ್ಲಿ ನಡೆಯಿತು.
ಈ ಪಂದ್ಯಾಟದಲ್ಲಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಪ್ರಾಥಮಿಕ ವಿಭಾಗದ ಬಾಲಕರ ತಂಡ ಪ್ರಥಮ ಸ್ಥಾನ,ಬಾಲಕಿಯರ ತಂಡ ಪ್ರಥಮ ಸ್ಥಾನ ಹಾಗೂ ಪ್ರೌಢ ವಿಭಾಗದ ಬಾಲಕರ ತಂಡ ಪ್ರಥಮ ಸ್ಥಾನ ಮತ್ತು ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಇವರನ್ನು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ದಿನಕರ ಪೂಜಾರಿ ಮತ್ತು ವಿಶಾಲಾಕ್ಷಿ ಹೆಚ್ ಆಳ್ವ ಇವರು ತರಬೇತುಗೊಳಿಸಿರುತ್ತಾರೆ.ಸ್ಪರ್ಧಾ ವಿಜೇತರನ್ನು ಶಾಲಾ ಮುಖ್ಯಸ್ಥರು ಮತ್ತು ಶಿಕ್ಷಕ – ಶಿಕ್ಷಕೇತರ ವೃಂದದವರು ಅಭಿನಂದಿಸಿದ್ದಾರೆ.