ಶ್ರೀರಾಮ ಪ್ರೌಢ ಶಾಲೆಯಲ್ಲಿ ವರ್ಚುವಲ್ ಕ್ಲಾಸ್ ಉದ್ಘಾಟನೆ
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ಮಣಿಪಾಲ ಫೌಂಡೇಶನ್ ಸಂಸ್ಥೆಯ ಸಹಕಾರದಿಂದ ನಡೆಯುತ್ತಿರುವ “ವರ್ಚುವಲ್ ಕ್ಲಾಸ್”ನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು “ಇಂದು ಭಾರತದ ಸರ್ವೇಸಾಮಾನ್ಯ ಮನುಷ್ಯ ಕೂಡ ವಿಜ್ಞಾನವನ್ನು ಒಪ್ಪಿಕೊಂಡಿದ್ದಾನೆ.ವಿಜ್ಞಾನ,ತಂತ್ರಜ್ಞಾನದ ಜೊತೆಗೆ ಮೂಲ ಚಿಂತನೆಯೊಂದಿಗೆ ವಿಜ್ಞಾನವನ್ನು ಸಾಕಾರಗೊಳಿಸಬೇಕು.ನಮ್ಮ ಮೂಲ ಚಿಂತನೆಗಳಾದ ಧರ್ಮ,ಸಂಸ್ಕೃತಿ,ಆಚಾರ, ವಿಚಾರದೊಂದಿಗೆ ವಿಜ್ಞಾನದಲ್ಲಿ ಭಾರತವು ಜಗತ್ತಿನಲ್ಲಿ ಅತೀ ಎತ್ತರಕ್ಕೆ ಬೆಳೆಯಬೇಕು.ಅದಕ್ಕೆ ವಿದ್ಯಾರ್ಥಿಗಳ ರೂಪದಲ್ಲಿ ಶಕ್ತಿ ಕೊಡುವ ಕೆಲಸವನ್ನು ಶಿಕ್ಷಣ ಸಂಸ್ಥೆಗಳು ಮಾಡಬೇಕು.ದೇಶದ ಭವಿಷ್ಯವನ್ನು ವಿದ್ಯಾರ್ಥಿಗಳು ನಿರ್ಮಾಣ ಮಾಡಬೇಕು ಎಂದು ಹೇಳಿದರು.

ಅತಿಥಿಯಾಗಿದ್ದ ಕನ್ಸಲ್‌ಟೆಂಟ್ ಲೀಗಲ್ ಕೌನ್ಸಿಲ್- ಎಂ.ಇ.ಎ.ಜಿ ಆದ ವಸಂತ ಕೃಷ್ಣ ಅವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಜ್ಞಾನ ಶಕ್ತಿ,ಸ್ಪೂರ್ತಿ ಶಕ್ತಿ ಬೆಳಗಬೇಕು,ಭವಿಷ್ಯದಲ್ಲಿ ಉತ್ತಮ ವಿದ್ಯಾರ್ಥಿಗಳಾಗಿ ಹೊರ ಹೊಮ್ಮಬೇಕು “ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ಮಹಮಾಯ ಫೌಂಡೇಶನ್ ನ ಕಾರ್ಯದರ್ಶಿ ಡಾ| ಉಷಾ ಪೈ,ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ ಉಪಸ್ಥಿತರಿದ್ದರು.
ಶಿಕ್ಷಕ ಕೊಟ್ರೇಶ್ ಸ್ವಾಗತಿಸಿ,ಸಹ ಶಿಕ್ಷಕಿ ಕು. ಅನ್ವಿತಾ ವಂದಿಸಿ.ದೀಕ್ಷಾ ಎನ್.ಪಿ.ಕಾರ್ಯಕ್ರಮ ನಿರೂಪಿಸಿದರು.