ಮೆಲ್ಕಾರ್ ಸಿಟಿ ಉಳಿಸಿ ಹೋರಾಟ ಸಮಿತಿ ಸಭೆ ಸಂಸದರು,ಶಾಸಕರು, ಅಧಿಕಾರಿಗಳ ಜತೆ ಚರ್ಚಿಸಲು ನಿರ್ಧಾರ
ಬಂಟ್ವಾಳ: ಮೆಲ್ಕಾರ್ ಸಿಟಿ ಉಳಿಸಿ ಹೋರಾಟ ಸಮಿತಿ ಸಭೆಯು ಅಧ್ಯಕ್ಷರಾದ ಉದಯ ಪೈಯವರ ಅಧ್ಯಕ್ಷತೆಯಲ್ಲಿ ಬಿರ್ವ ಸೆಂಟರ್‌ನಲ್ಲಿ ನಡೆಯಿತು.
ಸಭೆಯಲ್ಲಿ ಮೆಲ್ಕಾರ್ ಹೆದ್ದಾರಿಯ ನ್ಯೂನತೆ,ಅಂಡರ್ ಪಾಸ್ ಅಳವಡಿಕೆ,ಪ್ಲೈ ಓವರ್ ಕುರಿತಾಗಿ ಸಮಗ್ರವಾದ ಚರ್ಚೆ ನಡೆಸಲಾಯಿತು.ಈ ಬಗ್ಗೆ ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲ್,ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹಾಗೂ ಹೆದ್ದಾರಿ ಇಲಾಖಾ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸುವುದೆಂದು ತೀರ್ಮಾನಿಸಲಾಯಿತು.
ಸಭೆಯಲ್ಲಿ ಗೌರವಾಧ್ಯಕ್ಷರುಗಳಾದ ಡಾ. ಪ್ರಶಾಂತ್ ಮಾರ್ಲ,ಸಂಜೀವ ಪೂಜಾರಿ ಬೊಳ್ಳಾಯಿ,ಕಾರ್ಯದರ್ಶಿ ಮುಸ್ತಾಫ,ಮಾಜಿ ಪುರಸಭೆ ಸದಸ್ಯ ದಾಮೋದರ್ ಮೆಲ್ಕಾರ್ ಮುಂತಾದವರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನಿತ್ತರು. ಸತೀಶ್.ಪಿ.ಸಾಲ್ಯಾನ್ ಸ್ವಾಗತಿಸಿ,ವಂದಿಸಿದರು.