ಬಂಟ್ವಾಳ : ಮಾಜಿ ಸಚಿವ ಬಿ ರಮಾನಾಥ ರೈ ಅವರ 72 ನೇ ಹುಟ್ಟು ಹಬ್ಬದ ಪ್ರಯುಕ್ತ ಪಾಣೆಮಂಗಳೂರು ಬ್ಲಾಕ್,ಯುವ ಕಾಂಗ್ರೆಸ್ ಹಾಗೂ ಅಲ್ಪ ಸಂಖ್ಯಾತ ಘಟಕದ ವತಿಯಿಂದ ಬಿ.ಸಿ. ರೋಡಿನ ಹೋಟೇಲ್ ರಂಗೋಲಿ ಸಭಾಂಗಣದಲ್ಲಿ ಹಾಗೂ ಬಂಟ್ಚಾಳ ಬ್ಲಾಕ್ ಹಾಗೂ ಯುವ ಕಾಂಗ್ರೆಸ್ ವತಿಯಿಂದ ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ರಕ್ತದಾನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಬುಧವಾರ ನಡೆಯಿತು.

ಪ್ರತ್ಯೇಕವಾಗಿ ಎರಡು ಕಡೆಯಲ್ಲಿ ನಡೆದ ಶಿಬಿರವನ್ನು ಮಾಜಿ ಸಚಿವರಾದ ರಮಾನಾಥ ರೈ ಅವರು ಉದ್ಘಾಟಿಸಿ ಮಾತನಾಡಿ,ತನ್ನ ಬದುಕಿನುದ್ದಕ್ಕೂ ಸಾಮಾಜಿಕ ಸೇವೆಯನ್ನು ಮುಂದುವರಿಸಲಿದ್ದೇನೆ,ಶಾಸಕ,ಮಂತ್ರಿಯಾಗಿದ್ದ ಕಾಲದಲ್ಲಿ ಕ್ಷೇತ್ರದ ಜನರ ಹಿತವನ್ನು ಗಮನದಲ್ಲಿರಿಸಿಕೊಂಡು ಅಭಿವೃದ್ಧಿ ಕೆಲಸ ಮಾಡಿರುವ ತೃಪ್ತಿ ಹೊಂದಿದ್ದದ್ದೇನೆ ಎಂದರು.ಅಪಪ್ರಚಾರದಿಂದ ಚುನಾವಣೆಯಲ್ಲಿ ಸೋಲಾದರೂ ಬಂಟ್ವಾಳ ಕ್ಷೇತ್ರದ ಜನತೆಯ ಋಣ ತನ್ನ ಮೇಲಿದ್ದು,ಅದನ್ನು ತನ್ನ ಜನ್ಮ,ಜನ್ಮಾಂತರದಲ್ಲಿ ಮರೆಯಲು ಸಾಧ್ಯಯವಿಲ್ಲ,ರಾಜಕಾರಣದಲ್ಲಿ ಪರ- ವಿರೋಧವಿರುವುದು ಸಹಜವಾಗಿದ್ದು,ಪಕ್ಷದ ಕಾರ್ಯಕರ್ತರಿಗೆ ನೋವಾಗದಂತೆ ಕೆಲಸ ಮಾಡುವುದರ ಜತೆಗೆ,ಪಕ್ಷದ ಏಳಿಗೆಗೂ ಶ್ರಮಿಸಿದ್ದೆನೆ,ಮುಂದಿನ ದಿನದಲ್ಲಿಯು ಶಕ್ತಿಮೀರಿ ಕೆಲಸ ಮಾಡುವುದಾಗಿ ಭರವಸೆಯಿತ್ತರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶಿಕ್ಷಣ,ಸಾಹಿತ್ಯ ಮತ್ತು ಸಾಮಾಜಿಕ ಚಿಂತಕರಾದ ಡಾ. ಉದಯ್ ಕುಮಾರ್ ಇರ್ವತ್ತೂರ್ ಅವರು ಮಾತನಾಡಿ ರಮಾನಾಥ ರೈ ಬಾಲ್ಯದಿಂದ ನಡೆದು ಬಂದ ಹಾದಿಯನ್ನು ಸವಿಸ್ತಾರವಾಗಿ ವಿವರಿಸಿದರು.
ಇದೇ ವೇಳೆ ಅತೀ ಹೆಚ್ಚು ರಕ್ತದಾನಗೈದ ಸುನೀಲ್,ಮನೋಹರ್ ನೇರಂಬೋಳು ಅವರನ್ನು ಸನ್ಮಾನಿಸಲಾಯಿತು.ಹುಟ್ಟು ಹಬ್ಬದ ಪ್ರಯುಕ್ತ ಕೇಕ್ ಕತ್ತರಿಸಿ ಆಚರಿಸಲಾಯಿತು.ಯುವ ಕಾಂಗ್ರೆಸ್ ಕಾರ್ಯಕರ್ತರು 72 ಗುಲಾಬಿಯುಳ್ಳ ಹೂಮಾಲೆ ಹಾಕಿದರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಣೆ ಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ,ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ,ಎಂ.ಎಸ್. ಮುಹಮ್ಮದ್,ಪಿಯೂಸ್ ರೋಡ್ರಿಗಝ್,ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್,ಕೆಪಿಸಿಸಿ ಮಾಜಿ ಕಾರ್ಯದರ್ಶಿ ಅಶ್ವಿನ್ ಕುಮಾರ್ ರೈ,ಕಾಂಗ್ರೆಸ್ ಮುಖಂಡ ಸುದರ್ಶನ್ ಜೈನ್,ಲುಕ್ಮಾನ್ ಬಂಟ್ವಾಳ,ಬಿ.ಹೆಚ್ ಖಾದರ್,ಶಾಹುಲ್ ಹಮೀದ್,ಜಯಂತಿ ಪೂಜಾರಿ,ಅಬ್ಬಾಸ್ ಅಲಿ, ಸುಭಾಷ್ ಚಂದ್ರ ಶೆಟ್ಟಿ,ಲೋಲಾಕ್ಷ ಶೆಟ್ಟಿ,ಚರೀಷ್ಮಾ ರೈ,ರಮೇಶ್ ಕುಲಾಲ್,ಜಯಶೀಲಾ ಅಡ್ಯಂತಾಯ,ಜೋಸ್ವಿನ್ ಡಿಸೋಜಾ,ಚಿತ್ತರಂಜನ್ ಶೆಟ್ಟಿ,ಮಲ್ಲಿಕಾ ಪಕ್ಕಳ,ಐಡಾ ಸುರೇಶ್,ಸದಾಶಿವ ಬಂಗೇರ,ಮಾಯಿಲಪ್ಪ ಸಾಲ್ಯಾನ್,ಪದ್ಮನಾಭ್ ರೈ,ರೋಶನ್ ರೈ,ಪ್ರೀತಿರಾಜ್ ದ್ರಾವಿಡ್, ಸಂದೀಪ್ ಕುಮಾರ್,ರೆಡ್ ಕ್ರಾಸ್ ಸಂಸ್ಥೆಯ ಪ್ರಮುಖ ಪ್ರವೀಣ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು
ಬಂಟ್ಚಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿಕುಂದರ್ ಸ್ವಾಗತಿಸಿ,ವಂದಿಸಿದರು,ನಿಶ್ಚಲ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ವತಿಯಿಂದ ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಯಲ್ಲಿನ ಒಳರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು.
