ನೂತನ ರಿಕ್ಷಾ ತಂಗುದಾಣದ ಲೋಕಾರ್ಪಣೆ
ಬಂಟ್ವಾಳ: ವಿಧಾನ ಪರಿಷತ್ ಸದಸ್ಯರಾದ ಯು.ಬಿ.ವೆಂಕಟೇಶ್ ಅವರ 2019-20 ರ ಸಾಲಿನ ಪ್ರದೇಶಾಭಿವೃದ್ಧಿ ನಿಧಿಯಿಂದ ಬಂಟ್ವಾಳ ರಾ.ಹೆ.ಯ ತುಂಬೆ ಜಂಕ್ಷನ್ ನಲ್ಲಿ ನಿರ್ಮಿಸಲಾದ ನೂತನ ರಿಕ್ಷಾ ತಂಗುದಾಣದ ಲೋಕಾರ್ಪಣಾ ಕಾರ್ಯಕ್ರಮ ಬುಧವಾರ ನಡೆಯಿತು.
ಮಾಜಿ ಸಚಿವರಾದ ಬಿ.ರಮಾನಾಥ ರೈ ಅವರು ತಂಗುದಾಣವನ್ನು ಉದ್ಘಾಟಿಸಿ ಮಾತನಾಡಿ ಹೆದ್ದಾರಿಯ ಪಕ್ಕದಲ್ಲಿ ರಿಕ್ಷಾ ತಂಗುದಾಣ ನಿರ್ಮಾಣಕ್ಕೆ ರಾ.ಹೆ.ಇಲಾಖೆ ಇದೇ ಮೊದಲಿಗೆ ಅನುಮತಿ ನೀಡಿರುವುದು ವಿಶೇಷವಾಗಿದೆ.ರಿಕ್ಷಾ ಚಾಲಕರು ತಂಗುದಾಣದ ಸ್ವಚ್ಚತೆಗೆ ಗಮನ ಹರಿಸುವುದರ ಜತೆಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳುವಂತೆ ಸಲಹೆ ನೀಡಿದರಲ್ಲದೆ ತಂಗುದಾಣದ ನಿರ್ಮಾಣಕ್ಕೆ ಅನುದಾನ ಒದಗಿಸಿದ ವಿ.ಪ.ಸದಸ್ಯರಾದ ಯು.ಬಿ.ವೆಂಕಟೇಶ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ಗೇರು ನಿಗಮದ ಮಾಜಿ ಅಧ್ಯಕ್ಷ ಬಿ.ಎಚ್.ಖಾದರ್,ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್,ಮಾಜಿ ಜಿ.ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ,ಪದ್ಮಶೇಖರ ಜೈನ್,ಮಾಜಿ ತಾ.ಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ,ಮಾಜಿ ತಾ.ಪಂ ಸದಸ್ಯ ಸಂಜೀವ ಪೂಜಾರಿ ಬೊಳ್ಳಾಯಿ,ಪಾಣೆ ಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ರೈ,ಮಾಜಿ ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ,ಪುರಸಭಾ ಸದಸ್ಯ ವಾಸು ಪೂಜಾರಿ,ಪಕ್ಷದ ಮುಖಂಡ ಮಾಯಿಲಪ್ಪ ಸಾಲ್ಯಾನ್,ಸುರೇಶ್ ಜೋರ,ಮೋಹನ್ ಶೆಟ್ಟಿ,ವೆಂಕಪ್ಪ ಪೂಜಾರಿ ಬಂಟ್ವಾಳ,ಮಲ್ಲಿಕಾ ಶೆಟ್ಟಿ,ಲವೀನಾ ವಿಲ್ಮಾ ಮೋರಸ್,ಚಿತ್ತರಂಜನ್ ಶೆಟ್ಟಿ,ನಾರಾಯಣ ನಾಯ್ಕ್ ,ಜಗದೀಶ್ ಕುಂದರ್,ಸುಧಾಕರ ಶೆಣೈ ಖಂಡಿಗ,ರಜಾಕ್ ಕುಕ್ಕಾಜೆ,ಮನೋಹರ ನೇರಂಬೋಳು,ಉದ್ಯಮಿ ಹರೀಶ್ ಶೆಟ್ಟಿ ತುಂಬೆ,ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಸುಂದರ,ಕಾರ್ಯದರ್ಶಿ ಆನಂದ ಗುತ್ತಿಗೆದಾರ ಸದಾಶಿವ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಸ್ವಾಗತಿಸಿದರು.ರಮೇಶ್ ನಾಯಕ್ ರಾಯಿ ವಂದಿಸಿದರು.