ಕಲ್ಲಡ್ಕ ವಲಯದ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕಬ್ಬಡಿ ಪಂದ್ಯಾಟ 2023
ಬಂಟ್ವಾಳ: ಕಬ್ಬಡಿ ಆಟವು ಅಪ್ಪಟ ಸ್ವದೇಶಿ ಗ್ರಾಮೀಣ ಕ್ರೀಡೆಯಾಗಿದೆ, ಅದನ್ನು ಉಳಿಸುವುದು ಬೆಳೆಸುವುದು ನಮ್ಮ ಕರ್ತವ್ಯವಾಗಿದೆ ಎಂದು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು ಶಂಕರ್ ವಿ.ಅವರು ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣ ಕಛೇರಿ ಬಂಟ್ವಾಳ, ಪ್ರಾಥಮಿಕ ಶಾಲೆ, ಬೋಳಂತೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಬಂಟ್ವಾಳ ತಾಲೂಕಿನ ಬೋಳಂತೂರು ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಲ್ಲಡ್ಕ ವಲಯದ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕಬ್ಬಡಿ ಪಂದ್ಯಾಟ 2023 ನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೋಳಂತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಲಿನಿ ವಹಿಸಿದ್ದರು.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಶೀರ್ ಎನ್ , ಬಂಟ್ವಾಳ ತಾಲೂಕು ಪಂಚಾಯತಿನ ಮಾಜಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ಬೋಳಂತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಯಾಕುಬ್ ದಂಡೇಮಾರು, ಪಂಚಾಯತ್ ಸದಸ್ಯರುಗಳಾದ ಚಂದ್ರಶೇಖರ್ ರೈ, ಅಶ್ರಫ್ ಕೆ, ಅನ್ಸಾರ್, ಹಿತಾ ಶೆಟ್ಟಿ, ಪಂಚಾಯತ್ ಕಾರ್ಯದರ್ಶಿ ಅಶ್ರಫ್ , ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಸೌರತ್, ಕಲ್ಲಡ್ಕ ವಲಯದ ಕಬ್ಬಡಿ ನೋಡಲ್ ಅಧಿಕಾರಿ ಭಾಸ್ಕರ್ ನಾಯ್ಕ,ಮಾಜಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಇಸ್ಮಾಯಿಲ್ ಕೆ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯರಾಜ್, ಬಿ ಕೆ ಬಾಯ್ಸ್ ಬೋಳಂತೂರು ಇದರ ಅಧ್ಯಕ್ಷ ಮುಸ್ತಾಪ, ವಿದ್ಯಾರ್ಥಿ ಸಮಿತಿ ಅಧ್ಯಕ್ಷ ಇಬ್ರಾಹಿಂ ಕೇರಿ೦, ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಗೀತಾ ಎಸ್ ಸ್ವಾಗತಿಸಿ, ಶಾಲಾ ದೈಹಿಕ ಶಿಕ್ಷಕ ಹರೀಶ್ ವಿ ವಂದಿಸಿದರು. ಶಿಕ್ಷಕಿ ಮೇರಿ ಜಾನೆಟ್ ವಾಸ್ ಕಾರ್ಯಕ್ರಮ ನಿರೂಪಿಸಿದರು.
ಕಲ್ಲಡ್ಕ ವಲಯದ ಶಾಲೆಗಳ 19 ತಂಡಗಳು ಭಾಗವಹಿಸಿದ್ದರು.ಬಾಲಕರ ವಿಭಾಗದಲ್ಲಿ ಶ್ರೀರಾಮ ಪ್ರಾಥಮಿಕ ಶಾಲೆ ಕಲ್ಲಡ್ಕ ಪ್ರಥಮ ಸ್ಥಾನವನ್ನು, ದಾರುಲ್ ಅಶ್ಯರಿಯ ಸುರಿಬೈಲು ಶಾಲೆ ದ್ವಿತೀಯ ಸ್ಥಾನವನ್ನು, ಬಾಲಕಿಯರ ವಿಭಾಗದಲ್ಲಿ ಶ್ರೀರಾಮ ಪ್ರಾಥಮಿಕ ಶಾಲೆ ಕಲ್ಲಡ್ಕ ಪ್ರಥಮ ಸ್ಥಾನವನ್ನು, ಸರಕಾರಿ ಪ್ರಾಥಮಿಕ ಶಾಲೆ ನರಿಕೊಂಬು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
ಕಬ್ಬಡಿ ಪಂದ್ಯಾಟದ ತೀರ್ಪುಗಾರರಾಗಿ ದಿನಕರ್ ಮಾಣಿ, ಶೇಷಪ್ಪ ನಾಯ್ಕ್ ನೇರಳಕಟ್ಟೆ, ಜನಾರ್ಧನ್ ಕೆದಿಲ, ಸತ್ಯನಾರಾಯಣ ರೈ ಪೆರ್ನೆ, ದೀಪಕ್ ಬುಡೋಲಿ, ರಾಧಾಕೃಷ್ಣ ಪಾಣೆಮಂಗಳೂರು, ಜಯರಾಮ್ ರೈ ದುರ್ಮೆ, ಶೋಭಾ ನರಿಕೊಂಬು, ಸುನಿತಾ ರೈ ಅನಂತಾಡಿ ಭಾಗವಹಿಸಿದ್ದರು.