Published On: Thu, Aug 31st, 2023

ಮಧ್ವ: ಹೃದಯಾಘಾತದಿಂದ ಯುವತಿ ಸಾವು

ಬಂಟ್ವಾಳ:  ಮಲಗಿದ್ದಲ್ಲಿಯೇ ಯುವತಿಯೋರ್ವಳು ಹೃದಯಾಘಾತ ಕ್ಕೊಳಗಾಗಿ ಸಾವನ್ನಪ್ಪಿದ ಘಟನೆ ಕಾವಳಪಡೂರು ಗ್ರಾಮದ ಮಧ್ವ ಎಂಬಲ್ಲಿ ಬುಧವಾರ ಸಂಭವಿಸಿದೆ. ಕಾವಳಪಡೂರು ಗ್ರಾಮದ ಮಧ್ವ ಗುತ್ತು ರಾಜೀವ ಶೆಟ್ಟಿ-ಮೀನಾ ದಂಪತಿಯ ಪುತ್ರಿ ಮಿತ್ರಾ ಶೆಟ್ಟಿ (19) ಮೃತಪಟ್ಟವರೆಂದು ಗುರುತಿಸಲಾಗಿದೆ. 

ಮೂಲತ: ಕಾವಳಮೂಡೂರು ಪುಳಿಮಜಲಿನ ನಿವಾಸಿಯಾಗಿದ್ದ ಮಿತ್ರಾ ಅವರ ತಂದೆ ಹಾಗೂ ಸಹೋದರ ಬೆಂಗಳೂರಿನಲ್ಲಿದ್ದು, ಪ್ರಸ್ತುತ ಮಿತ್ರಾ ಅವರು ಬಿ.ಸಿ.ರೋಡ್‌ನಲ್ಲಿ ಖಾಸಗಿ  ಉದ್ಯೋಗದಲ್ಲಿದ್ದಾರೆ, ಮಧ್ವದಲ್ಲಿ ದೊಡ್ಡಮ್ಮನ ಮನೆಯಲ್ಲಿ ತಾಯಿ ಜತೆ ವಾಸವಿದ್ದು,ಮಂಗಳವಾರ ರಾತ್ರಿ ಊಟ ಮುಗಿಸಿ ತಾಯಿ ಜತೆ ಮಲಗಿದ್ದರು. ಬೆಳಗ್ಗೆ ಹೊತ್ತು ಕಳೆದರೂ ಏಳದಿರುವುದನ್ನು  ಗಮನಿಸಿದ ತಾಯಿ ಎಬ್ಬಿಸುವಾಗ ಅವರು ಮೃತ ಪಟ್ಟಿರುವುದು ತಿಳಿದು ಬಂದಿದೆ. ತಕ್ಷಣ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಮಿತ್ರಾ ಮೃತಪಟ್ಟಿರುವುದನ್ನು ಧೃಢಪಡಿಸಿದ್ದರು.ಬಳಿಕ ಮರಣೋತ್ತರ ಪರೀಕ್ಷೆ ನಡೆಸಿದ್ದು, ಸಾವಿಗೆ ಹೃದಯಾಘಾತ ಕಾರಣವೆಂದು ವೈದ್ಯರು ತಿಳಿಸಿದ್ದಾರೆ. ಮೃತ ದೇಹವನ್ನು ಹೆಚ್ಚಿನ ಪರೀಕ್ಷೆಗಾಗಿ ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸಲಾಗಿದೆ.
ಮೃತರು ತಂದೆ, ತಾಯಿ, ಸಹೋದರನನ್ನು ಅಗಲಿದ್ದಾರೆ. ಮಿತ್ರಾ ಅವರು ಪದವೀಧರೆಯಾಗಿದ್ದು, ಸ್ಥಳೀಯವಾಗಿ ಸಂಘ, ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಅವರ ನಿಧನಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಅವರು ತೀವ್ರ ಶೋಕ  ವ್ಯಕ್ತಪಡಿಸಿದ್ದಾರೆ. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter