ವಾಮದ ಪದವು ಸರಕಾರಿ ಕಾಲೇಜಿನಲ್ಲಿ ಸಮಾಜ ಕಾರ್ಯ ವೇದಿಕೆಯ ಉದ್ಘಾಟನೆ
ಬಂಟ್ವಾಳ: ವಾಮದ ಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ಸಮಾಜಕಾರ್ಯ ವೇದಿಕೆಯ ಉದ್ಘಾಟನೆ ಹಾಗೂ ಕೌಶಲ್ಯ ಅಭಿವೃದ್ದಿ ತರಬೇತಿ ಕಾರ್ಯಾಗಾರವು ಜರುಗಿತು.

ಪ್ರಾಂಶುಪಾಲರಾದ ಡಾ. ರಾಧಾಕೃಷ್ಣ ಹೆಚ್.ಬಿ ಅವರು ಕಾರ್ಯಕ್ರಮವನ್ನು ಉದ್ಟಾಟಿಸಿ ಮಾತನಾಡಿ, ಕಾಲೇಜಿನ ಸಮಾಜಕಾರ್ಯ ವೃತ್ತಿಯಲ್ಲಿ ವಿವಿಧ ರೀತಿಯ ಕಾರ್ಯಕ್ರಮ ಆಯೋಜನೆಯ ಮಹತ್ವದೊಂದಿಗೆ ತರಭೇತಿಯನ್ನು ಸದುಪಯೋಗಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾದ್ಯಾಪಕರಾದ ಡಾ. ವಿಶಾಲ್ ಪಿಂಟೋ ಅವರು ವಿವಿದ ಸಾರ್ವಜನಿಕ ಸಂದರ್ಭಗಳಲ್ಲಿ ಕಾರ್ಯಕ್ರಮದ ತಯಾರಿ, ಸಂಯೋಜನೆ, ಪ್ರಸ್ತುತಿ, ವರದಿ ಮುಂತಾದ ವಿಷಯದ ಬಗ್ಗೆ ಮಾಹಿತಿ ನೀಡಿದರು.
ಕಾಲೇಜಿನ ಐ.ಕ್ಯೂ.ಎಸ್.ಸಿ ಘಟಕದ ಸಂಯೋಜಕ ಪ್ರೋ. ಆಶೋಕ್ ಕುಮಾರ್ ಬಿ, ಸಮಾಜಕಾರ್ಯ ವಿಭಾಗದ ಹೆಚ್.ಓ.ಡಿ ಡಾ. ಮೇರಿ ಎಮ್.ಜೆ., ಸಹಾಯಕ ಪ್ರಾದ್ಯಾಪಕರಾದ ಉದಯ ಕುಮಾರ್ ಸಿ.ಆರ್., ಚಂದ್ರ ಎಸ್., ಜಯರಾಮ, ಸಮಾಜಕಾರ್ಯ ವೇದಿಕೆಯ ವಿದ್ಯಾರ್ಥಿ ಸಂಚಾಲಕ ರೂಪೇಶ್ ಉಪಸ್ಥಿತರಿದ್ದರು.