“ಇಂಟರಾಕ್ಟ್ ಕ್ಲಬ್ ಗಳ ಪದಗ್ರಹಣ “, “ಸಾಮಾಜಿಕ ಜಾಗೃತಿ ಅರಿವು “ಮತ್ತು “ಸೆಲ್ಯೂಟ್ ಫಾರ್ ಇಸ್ರೋ” ಕಾರ್ಯಕ್ರಮ
ಬಂಟ್ವಾಳ: ರೋಟರಿ ಕ್ಲಬ್ ಬಿ.ಸಿ. ರೋಡ್ ಸಿಟಿ ಇದರ ವತಿಯಿಂದ “ಇಂಟರಾಕ್ಟ್ ಕ್ಲಬ್ ಗಳ ಪದಗ್ರಹಣ “, “ಸಾಮಾಜಿಕ ಜಾಗೃತಿ ಅರಿವು “ಮತ್ತು “ಸೆಲ್ಯೂಟ್ ಫಾರ್ ಇಸ್ರೋ” ಕಾರ್ಯಕ್ರಮ ಬಿ.ಸಿ. ರೋಡ್ ರೋಟರಿ ಸಮುದಾಯ ಭವನದಲ್ಲಿ ನಡೆಯಿತು.
ನಿಯೋಜಿತ ರೋಟರಿ ಜಿಲ್ಲಾ ಗವರ್ನರ್ ವಿಕ್ರಂ ದತ್ತ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳ ಮುಂದಿನ ಜೀವನವು ಅತ್ಯಂತ ಹಸನಾಗಲಿ ಎಂಬ ದೃಷ್ಟಿಯಿಂದ ವಿದ್ಯಾಭ್ಯಾಸದ ಸಮಯದಲ್ಲಿ ಉತ್ತಮ ಮಾರ್ಗದರ್ಶನವನ್ನು ನೀಡಿ ಸಮಾಜ ಮುಖಿಯಾದ ಕೆಲಸಗಳನ್ನು ಮಾಡಲು ಆಸಕ್ತಿ ತುಂಬಿ, ಇತರರಿಗೂ ಸಹಾಯ ಮಾಡುವ ಮನೋಭಾವನೆ ಬೆಳಸಿ ಜೀವನ ಸಾಗಿಸ ಬೇಕೆಂಬ ನಿಟ್ಟಿನಲ್ಲಿ ರೋಟರಿ ಕ್ಲಬ್ ಬಿ.ಸಿ ರೋಡ್ ಸಿಟಿಯು ಹಮ್ಮಿಕೊಂಡ ಈ ಕಾರ್ಯಕ್ರಮವು ಅರ್ಥಪೂರ್ಣವಾಗಿದೆ ಎಂದರು.
ರೋಟರಿ ಕ್ಲಬ್ ಬಿ.ಸಿ.ರೋಡ್ ಸಿಟಿಯ ಅಧ್ಯಕ್ಷರಾದ ರೊ. ಗಣೇಶ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು.
ನಿಕಟಪೂರ್ವ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್, ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್ ಲಾರೆನ್ಸ್ ಗೋನ್ಸಾಲೀಸ್, ವಲಯ ಸೇನಾನಿ ರವೀಂದ್ರ ದರ್ಬೆ, ಅಸಿಸ್ಟೆಂಟ್ ಗವರ್ನರ್ ರಾಘವೇಂದ್ರ ಭಟ್, ನಿಕಟ ಪೂರ್ವ ಎಜಿ ಇಲಿಯಾಸ್ ಸ್ಯಾಂಕ್ಟಿಸ್ ಭಾಗವಹಿಸಿದ್ದರು
ಈ ಸಂದರ್ಭದಲ್ಲಿ 11 ಇಂಟರಾಕ್ಟ್ ಕ್ಲಬ್ ಗಳಾದ ಎಸ್ ವಿ ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆ ಬಂಟ್ವಾಳ, ಸರಕಾರಿ ಪ್ರಾಥಮಿಕ ಶಾಲೆ ನಾಯಿಲ ನರಿಕೊಂಬು, ಸರಕಾರಿ ಪ್ರೌಢಶಾಲೆ ಮಂಚಿ ಕೊಲ್ನಾಡು, ಸರಕಾರಿ ಪ್ರೌಢಶಾಲೆ ಸುರಿಬೈಲು, ಸರಕಾರಿ ಪ್ರೌಢಶಾಲೆ ನಾಶ ಕೊಲ್ನಾಡು, ಜಮ್ ಪಬ್ಲಿಕ್ ಸ್ಕೂಲ್ ಗೋಳ್ತಮಜಲು ಕಲ್ಲಡ್ಕ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕಾಜೆ ಮಂಚಿ, ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನಲ್ಕೆಮಾರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬ್ರಹ್ಮರಕೂಟ್ಲು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭ ಕ್ಲಬ್ ಗಳ ಪದಗ್ರಹಣ ಮಾಡಲಾಯಿತು.
ಜಿ ಎಸ್ ಅರ್ ಪದ್ಮನಾಭ ರೈ, ಸತೀಶ್ ಕುಮಾರ್, ಮಾಜಿ ಅಧ್ಯಕ್ಷರಾದ ಪಲ್ಲವಿ ಕಾರಂತ್, ಮೊದಲಾದವರು ವೇದಿಕೆಯಲ್ಲಿದ್ದರು. .
ಸಭಾ ಕಾರ್ಯಕ್ರಮದ ಬಳಿಕ ಭಾರತ್ ಸೇವಾದಳ ಜಿಲ್ಲಾ ಸಂಘಟಕರಾದ ಮಂಜೇಗೌಡ ಅವರು ರಾಷ್ಟ್ರಧ್ವಜದ ಬಗ್ಗೆ ಮಾಹಿತಿ, ಇಂಟರಾಕ್ಟ್ ಬಗ್ಗೆ ಕ್ರಿಯೇಟ್ ಹೋಪ್ ವಿಶ್ವಾಸ್ ರವರಿಂದ, ಭಾರತದ ಸೇನೆಯ ಬಗ್ಗೆ ಮೇಜರ್ ಸುಧೀರ್ ಪೈ, ಟ್ರಾಫಿಕ್ ಜಾಗೃತಿ ಹಾಗೂ ಡ್ರಗ್ಸ್ ಬಗ್ಗೆ ಸಂಚಾರಿ ಇನ್ಸ್ ಪೆಕ್ಟರ್ ಸುತೇಶ್ , ನಾಯಕತ್ವದ ಬಗ್ಗೆ ಸತೀಶ್ ಬೋಳಾರ್ ಅವರು ಮಾಹಿತಿ ನೀಡಿದರು.
ಚಂದ್ರಯಾನ-3 ಯಶಸ್ವಿ ಗೊಳಿಸಿದ ಇಸ್ರೋ ತಂಡಕ್ಕೆ ಅಭಿನಂದನಾ ಕಾರ್ಯಕ್ರಮವನ್ನು ಪೃಥ್ವಿರಾಜ್ ತಂಡ ನೆರವೇರಿಸಿದರು.
ಕಾರ್ಯದರ್ಶಿ ಮಧುಸೂದನ್ ವಂದಿಸಿದರು. ಶೇಷಪ್ಪ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.