ಅಮ್ಟೂರು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ನರಹರಿ ಪರ್ವತದ ಸದಾಶಿವ ದೇವರ ನಗರ ಭಜನೆಗೆ ಚಾಲನೆ
ಬಂಟ್ವಾಳ: ಮೆಲ್ಕಾರ್ ಶ್ರೀ ನರಹರಿ ಪರ್ವತ ಸದಾಶಿವ ದೇವಾಲಯದ ಜೀರ್ಣೋದ್ಧಾರ ಪ್ರಯುಕ್ತ ನಗರ ಭಜನೆ ಸಂಕೀರ್ತನೆಗೆ ಚಾಲನೆ ನೀಡಲಾಯಿತು. ಅಮ್ಟೂರು ಶ್ರೀ ಕೃಷ್ಣ ಮಂದಿರದಲ್ಲಿ ವೇದಮೂರ್ತಿ ನಾರಾಯಣ್ ರಾವ್ ನಿಟಿಲಾಪುರ ಹಾಗೂ ಶ್ರೀ ನರಹರಿ ಪರ್ವತದ ಪ್ರಧಾನ ಅರ್ಚಕ ಪರಮೇಶ್ವರ ಮಯ್ಯ ಅವರು ದೀಪ ಪ್ರಜ್ವಲನದೊಂದಿಗೆ ‘ನಗರ ಭಜನೆ ಪ್ರಾರಂಭೋತ್ಸವ’ಕ್ಕೆ ಚಾಲನೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಡಾ.ಆತ್ಮರಂಜನ್.ರೈ ವಹಿಸಿದ್ದರು. ಮಾಜಿ ಶಾಸಕರುಗಳಾದ ಎ.ರುಕ್ಮಯ ಪೂಜಾರಿ ಪದ್ಮನಾಭ ಕೊಟ್ಟಾರಿ, ಹಿರಿಯರಾದ ಮಹಾಬಲ ಶೆಟ್ಟಿ ನಂದಗೋಕುಲ, ಶ್ರೀ ಕೃಷ್ಣ ಮಂದಿರದ ಅಧ್ಯಕ್ಷರಾದ ರಮೇಶ್ ಶೆಟ್ಟಿಗಾರ್, ಮಂದಿರದ ಗೌರವಾಧ್ಯಕ್ಷರಾದ ಶಂಕರ ಓಣಿಬೈಲು, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನರಹರಿ ಪರ್ವತ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ.ಪ್ರಶಾಂತ್ ಮಾರ್ಲ, ಮೋಕ್ತೆಸರರಾದ ಪ್ರತಿಭಾ.ಎ.ರೈ, ಕೃಷ್ಣ ನಾಯ್ಕ, ಮಾಧವ ಶೆಣೈ, ಸುಂದರ ಬಂಗೇರ, ಯಂ.ಯನ್.ಕುಮಾರ್ ಹಾಗೂ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಕಿಶೋರ್.ಕೆ. ಕುದ್ಮುಲ್, ಸದಸ್ಯರಾದ ದಾಮೋದರ್ ಮೆಲ್ಕಾರ್, ವಿಠ್ಠಲ ಶೆಣೈ, ಓಂ ಪ್ರಕಾಶ್, ವಿಠ್ಠಲ ಮೆಲ್ಕಾರ್, ಗಿರಿಧರ್.ಪಿ.ಬಿ, ವಿಠಲ ಆಚಾರ್ಯ, ಸತೀಶ.ಪಿ ಸಾಲಿಯಾನ್, ಹರೀಶ್ ಶೆಣೈ ಮುಂತಾದವರು ಉಪಸ್ಥಿತರಿದ್ದರು.
ಶ್ರೀ ಕೃಷ್ಣ ಮಂದಿರ ಕಾರ್ಯದರ್ಶಿ ಕುಶಾಲಪ್ಪ ಗೌಡ ಸ್ವಾಗತಿಸಿದರು. ನರಹರಿ ಪರ್ವತ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಶಂಕರ ಆಚಾರ್ಯರವರು ವಂದಿಸಿದರು.