Published On: Thu, Aug 17th, 2023

ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಬಿಜೆಪಿಯಿಂದ ಬಿ. ಸಿ. ರೋಡಿನಲ್ಲಿ ತಿರಂಗಾಯಾತ್ರೆ

ಬಂಟ್ವಾಳ:ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಗುರುವಾರ ತಿರಂಗ ಯಾತ್ರೆ ಬಿ. ಸಿ. ರೋಡಿನ ರಾಜಾರಸ್ತೆಯಲ್ಲಿ ನಡೆಯಿತು. ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರದ ಬಳಿಯಿಂದ ಹೊರಟ ತಿರಂಗಾ ಯಾತ್ರೆ ಶ್ರೀ ರಕ್ತೇಶ್ವರಿ ದೇವಸ್ಥಾನದ ಬಳಿ ಮೇಲ್ಸ್ ತುವೆಯ ಅಡಿಭಾಗದಲ್ಲಿ ಸಂಪನ್ನಗೊಂಡಿತು.

ಬಳಿಕ ಸಭೆಯನ್ನುದ್ದೇಶಿಸಿ ಸಂಸದ, ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ,1000 ವರ್ಷಗಳ ಕಾಲ ಗುಲಾಮರ ಕೈಯಲ್ಲಿದ್ದ ಭಾರತಕ್ಕೆ ಮಹಾತ್ಮಗಾಂಧಿಯವರ ಅಹಿಂಸಾ ತತ್ವ ಹಾಗೂ ವೀರ ಸಾರ್ವಕರ್,ಸುಭಾಶ್ಚಂದ್ರ ಬೋಸ್ ರಂತಹ ಕ್ರಾಂತಿಕಾರಿ ಪುರುಷರು ಮತ್ತು ಸಾವಿರಾರು ಮಂದಿ ರಾಷ್ಟ್ರಭಕ್ತರ ಹೋರಾಟದ ಫಲವಾಗಿ ಸ್ವಾತಂತ್ರ್ಯ ದೊರತಿದ್ದು,ಅಂತಹ ಮಹನೀಯರ ಸ್ಮರಣೆ ಇಂದು ಅಗತ್ಯವಿದೆ ಎಂದರು.

ಸ್ವಾತಂತ್ರ್ಯ ಬಳಿಕದ 75 ವರ್ಷದ  ಕಾಲಘಟ್ಟದಲ್ಲಿ 60 ವರ್ಷದ ಕಾಲಘಟ್ಟದಲ್ಲಿ ದೇಶದ ಆಡಳಿತ ಒಂದು ರೀತಿಯಲ್ಲಿದ್ದರೆ.  15 ವರ್ಷಗಳ ಪೈಕಿ‌ ಕಳೆದ 9 ವರ್ಷ ಪ್ರಧಾನಿ ನರೇಂದ್ರಮೋದಿಯವರ ಆಡಳಿತದಲ್ಲಿ ಭಾರತದ ಆರ್ಥಿಕ ವಿಕಸನ ,ಅಭಿವೃದ್ಧಿಯ ಚಿಂತನೆಯಿಂದ ಇಡೀ ಜಗತ್ತೇ ಕೊಂಡಾಡುವಂತಾಗಿದೆ ಎಂದರು.
ಭಾರತದ ಯೋಗ ,ಗಂಗಾತೀರ್ಥ ಪ್ರಧಾನಿ ಮೋದಿಯವರಿಂದಾಗಿ ಇಡೀ ವಿಶ್ವಕ್ಕೆ ಪರಿಚಯವಾಗಿದ್ದು,ಕೊರೋನ ಸಂದರ್ಭದಲ್ಲಿ ಭಾರತ ತೆಗೆದುಕೊಂಡಿದ್ದ ನಿಲುವು,ಕಾರ್ಯಾಚರಣೆ ವಿಶ್ವದಲ್ಲೇ ಗಮನಸೆಳೆದಿತ್ತು ಎಂದ ಅವರು ಪಾಕಿಸ್ಥಾನ,ಶ್ರೀಲಂಕಾದಂತ ದೇಶಗಳಿಗೆ  ಆರ್ಥಿಕ ಶಕ್ತಿ ನೀಡಲು ಸಮರ್ಥವಾದ ಭಾರತ ವಿಜ್ಞಾನದಲ್ಲಿಯು ಮುಂದುವರಿದ ದೇಶವಾಗಿ ಎದ್ದುನಿಂತಿದೆ ಎಂದರು.


 ದೇಶದ ಅಭಿವೃದ್ಧಿಯ ಜತೆಗೆ ಮೂಲ ಸಂಸ್ಕೃತಿಯನ್ನು ಉಳಿಸುವ ದಿಕ್ಕಿನಲ್ಲಿ  ಪ್ರಧಾನಿ ಮೋದಿಯವರ ಶತಮಾನದ ಸ್ವಾತಂತ್ರ್ಯದ ಅಮೃತಕಾಲದಲ್ಲಿ ಭಾರತವನ್ನು ವಿಶ್ವದಲ್ಲೇ ಒಂದನೇ ಸ್ಥಾನಕ್ಕೆ ತರುವ ಕನಸನ್ನು ಹೊತ್ತಿದ್ದು, ಇದನ್ನು ನನಸು ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಸಹಕರಿಸಬೇಕಾದ ಅಗತ್ಯವಿದ್ದು, ಪ್ರಧಾನಿಯವರ ಕರೆಯಂತೆ ಪ್ರತಿಯೋರ್ವರಲ್ಲಿಯು ರಾಷ್ಟ್ರಭಕ್ತಿ ಜಾಗೃತಿಗೊಳ್ಳಬೇಕು,ಮನೆ,ಮನೆಯಲ್ಲಿ ತಿರಂಗಾ ಹಾರಿಸುವ ಮೂಲಕ ರಾಷ್ಟ್ರ ಭಕ್ತಿಯ ಉದ್ದೀಪನವಾಗಲಿ ಎಂದರು.


ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ,ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ್ ಮೂಡಬಿದಿರೆ ಸಭೆಯನ್ನುದ್ದೇಶಿಸಿ ಮಾತನಾಡಿದರು.ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷರಾದ ದೇವಪ್ಪ ಪೂಜಾರಿ ಸಭಾಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಜಿಲ್ಲಾ ಪ್ರ.ಕಾರ್ಯದರ್ಶಿ ರಾಮದಾಸ ಬಂಟ್ವಾಳ, ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ,ಜಿಲ್ಲಾ ಮಾಧ್ಯಮ ಪ್ರಮುಖರಾದ ಸಂದೇಶ ಶೆಟ್ಟಿ ವೇದಿಕೆಯಲ್ಲಿದ್ದರು.

ಮಾಜಿ ಬೂಡ ಅಧ್ಯಕ್ಷರಾದ ದೇವದಾಸ ಶೆಟ್ಟಿ,  ಬಿಜೆಪಿ ನಾಯಕಿ ಸುಲೋಚನಾ ಜಿ.ಕೆ.ಭಟ್,ಬಿಜೆಪಿ ಜಿಲ್ಲಾ ಯುವ ಮೋರ್ಛಾ ಪ್ರ.ಕಾರ್ಯದರ್ಶಿ ಸುದರ್ಶನ್ ಬಜ,ಜಿ.ಪಂ.ಮಾಜಿ ಸದಸ್ಯರಾದ ಕಮಾಲಾಕ್ಷಿ ಪೂಜಾರಿ,ಚೆನ್ನಪ್ಪ ಕೋಟ್ಯಾನ್, ರವೀಂದ್ರ ಕಂಬಳಿ,ಪ್ರಮುಖರಾದ ದಿನೇಶ್ ಅಮ್ಟೂರು,ಪುರುಷೋತ್ತಮ ಶೆಟ್ಟಿ ವಾಮದಪದವು,ಮೋನಪ್ಪ ದೇವಸ್ಯ, ಪುರುಷೋತ್ತಮ ಸಾಲಿಯಾನ್,ಕೃಷ್ಣಪ್ಪ ಪೂಜಾರಿ ದೋಟ,ಉದಯಕುಮಾರ್ ಕಾಂಜಿಲ,ಗಣೇಶ್ ರೈ ಮಾಣಿ,ಪುಷ್ಪರಾಜ್ ಚೌಟ, ರಿಚಾಡ್೯ ಡಿಸೋಜ, ಸಂತೋಷ್ ಕುಮಾರ್ ಬೆಟ್ಟು,ಉಮೇಶ್ಅರಳ, ಭಾರತಿ ಶೆಟ್ಟಿ,ಪುರಸಭಾ ಸದಸ್ಯರಾದ ವಿದ್ಯಾವತಿ ಪ್ರಮೋದ್ ಕುಮಾರ್,ಶಶಿಕಲಾ,ರೇಖಾ ಪೈ ಮೊದಲಾದವರಿದ್ದರು.
ಯುವಮೋರ್ಛಾ ಅಧ್ಯಕ್ಷ ಕಿಶೋರ್ ಪಲ್ಲಿಪಾಡಿ ವಂದೇ ಮಾತರಂ ಗೀತೆ ಹಾಡಿದರು.

ಮಂಡಲದ ಪ್ರ.ಕಾರ್ಯದರ್ಶಿ ಡೊಂಬಯ ಅರಳ ಸ್ವಾಗತಿಸಿದರು.ಇನ್ನೋರ್ವಪ್ರ.ಕಾರ್ಯದರ್ಶಿ ರವೀಶ್ ಶೆಟ್ಟಿ ವಂದಿಸಿದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter