ಮಂಚಿ: ಶಿಕ್ಷಕಿಗೆ ಬೆದರಿಕೆ ಪ್ರಕರಣ ಆರೋಪಿ ವಿರುದ್ಧ ಕ್ರಮಕ್ಕೆ ಶಾಸಕ ಆಗ್ರಹ
ಬಂಟ್ವಾಳ:ಇಲ್ಲಿನ ಮಂಚಿ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆ ವೀರ ಸಾವರ್ಕರ್ ಸಹಿತ ಸ್ವಾತಂತ್ರ್ಯ ಹೋರಾಟಗಾರರಿಗೆ ವಿದ್ಯಾರ್ಥಿಗಳಿಂದ ಜೈಕಾರ ಹಾಕಿಸಿದ್ದಾರೆ ಎಂಬ ನೆಪದಲ್ಲಿ ಶಿಕ್ಷಕಿಗೆ ಬೆದರಿಕೆ ಒಡ್ಡಿ ಅವರಿಂದ ಕ್ಷಮೆ ಕೇಳಿಸಿದ ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಆಗ್ರಹಿಸಿದ್ದಾರೆ.
ಈ ಶಾಲೆಯಲ್ಲಿ ಎಸ್ ಡಿ ಪಿ ಐ ಸದಸ್ಯ ಬಶೀರ್ ಎಂಬಾತನು ರಂಪಾಟ ನಡೆಸಿ ಶಿಕ್ಷಕರ ಕರ್ತವ್ಯಕ್ಕೆ ಅಡ್ಡಿಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ನಡೆಸಿದ್ದಾನೆ ಎಂದು ಆರೋಪಿಸಿ, ಈತನ ವಿರುದ್ಧ ಪೊಲೀಸರು ಸಹಿತ ಸಂಬಂಧಪಟ್ಟ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.