ಬಂಟ್ವಾಳ ಭಾರತೀಯ ಜೈನ್ ಮಿಲನ್ ನೂತನ ಪದಾಧಿಕಾರಿಗಳ ಪದಗ್ರಹಣ, ಆಟಿಕೂಟ
ಬಂಟ್ವಾಳ: ಭಾರತೀಯ ಜೈನ್ ಮಿಲನ್ ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಆಟಿಕೂಟ ಕಾರ್ಯಕ್ರಮವು ಸಿದ್ಧಕಟ್ಟೆ ಬಸದಿಯ ಸ್ವಸ್ತಿಕ್ ಸಭಾಭವನದಲ್ಲಿ ನಡೆಯಿತು.
ಮಾಜಿ ಸಚಿವ ಅಭಯಚಂದ್ರ ಜೈನ್ ಕಾರ್ಯಕ್ತಮವನ್ನು ಉದ್ಘಾಟಿಸಿ ಮಾತನಾಡಿ,ಸಮಾನತೆ,ಸಹೋದರತೆ ಇದ್ದಾಗ ಸಮಾಜದಲ್ಲಿ ಬಾಂಧವ್ಯ ಹೆಚ್ಚಾಗುತ್ತದೆ .ಬದಲಾದ ಸಮಾಜಕ್ಕೆ ಹೊಂದಿಕೊಂಡು ಬದುಕು ಅನಿವಾರ್ಯವಾಗಿದೆ ಎಂದು ತಿಳಿಸಿದರು .ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಿಲನ್ ನ ನಿಕಟ ಪೂರ್ವಅಧ್ಯಕ್ಷರಾದ ದೀಪಕ್ ಕುಮಾರ್ ಜೈನ್ ವಹಿಸಿದ್ದರು.
ಮಿಲನ್ 8ರ ಉಪಾಧ್ಯಕ್ಷರಾದ ಸುದರ್ಶನ್ ಜೈನ್ ಪದ ಪ್ರಧಾನ ಪೌರೋಹಿತ್ಯವನ್ನು ನಡೆಸಿದರು. ಮೂಡಬಿದ್ರೆ ಎಕ್ಸಲೆಂಟ್ ಕಾಲೇಜ್ ನ ಅಧ್ಯಕ್ಷರಾದ ಯುವರಾಜ್ ಜೈನ್ , ಮಿಲನ್ ಮಂಗಳೂರು ವಿಭಾಗದ ಉಪಾಧ್ಯಕ್ಷರಾದ ಪ್ರಮೋದ್ ಕುಮಾರ್, ಮಿಲನ್ ನಿರ್ದೇಶಕರಾದ ಮೂಡುಬಿದಿರೆಯ ಜಯರಾಜ ಕಂಬಳಿ ಅತಿಥಿಗಳಾಗಿ ಭಾಗವಹಿಸಿದ್ದರು.
ಮಿಲನ್ ಮಂಗಳೂರು ವಿಭಾಗದ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್ ಆಟಿಕೂಟದ ಮಹತ್ವವನ್ನು ತಿಳಿಸಿದರು. ಬಂಟ್ವಾಳ ಜೈನ್ ಮಿಲನ್ ನೂತನ ಅಧ್ಯಕ್ಷರಾಗಿ ಮಧ್ವರಾಜ್ ಜೈನ್ ಪಂಜಾಲು ಆಯ್ಕೆಯಾದರು . ವಿನಯ ಚಂದ್ರ ಜೈನ್ ಕಾರ್ಯಕ್ರಮ ನಿರೂಪಿಸಿದರು .ಡಾ. ಸುದೀಪ್ ಕುಮಾರ್ ಸಿದ್ಧಕಟ್ಟೆ ಸ್ವಾಗತಿಸಿ ನೂತನ ಕಾರ್ಯದರ್ಶಿ ಭರತ್ ಕುಮಾರ್ ವಂದಿಸಿದರು.