ಪೊಳಲಿಸರಕಾರಿ ಶಾಲೆಯಲ್ಲಿ ಆಟಿಡೊಂಜಿ ದಿನ
ಕೈಕಂಬ: ಸಂಸ್ಕೃತಿ ಒಂದು ತಲೆಮಾರಿಗೆ ಸೀಮಿತವಾಗಬಾರದು. ಅದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಪ್ರಸರಣವಾಗಬೇಕು. ಆಚರಣೆಗಳು ಮಕ್ಕಳಿಗೆ ಮನೆಯಿಂದ ಮಾತ್ರವಲ್ಲ ಶಿಕ್ಷಣದ ರೂಪದಲ್ಲಿ ವಿದ್ಯಾರ್ಥಿಗಳಿಗೂ ದೊರೆಯಲು ಸರಕಾರಿ ಪ್ರೌಢಶಾಲೆ ಪೊಳಲಿ ಶ್ರಮಿಸುತ್ತಿದೆ ಎಂದು ಆಟಿಡೊಂಜಿ ದಿನ ಎಂಬ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಬಂಟ್ವಾಳ ರೋಟರಿ ಕ್ಲಬ್ ನ ಅಧ್ಯಕ್ಷರಾದ ರೋಟೆರಿಯನ್ ಪ್ರಕಾಶ್ ಬಾಳಿಗ ಅಭಿಪ್ರಾಯ ಪಟ್ಟರು.

ತನಗೆ ತಿಳಿಯದೆ ಅದೆಷ್ಟೇ ವಿಷಯಗಳು ಇಂದು ವಿದ್ಯಾರ್ಥಿಗಳಿಂದ ತಿಳಿಯಲ್ಪಟ್ಟೆ ಎಂದು ಹರ್ಷ ವ್ಯಕ್ತಪಡಿಸಿದರು. ಶಾಲೆ ಬಗ್ಗೆ ಅಭಿಮಾನವನ್ನು ವ್ಯಕ್ತಪಡಿಸುತ್ತಾ ಇಂತಹ ಆಚರಣೆಗಳು ಪ್ರಕೃತಿಯ ಮಹತ್ವವನ್ನು ತಿಳಿಸಿಕೊಡುತ್ತದೆ ಎಂದು ಪೂರ್ವಾಧ್ಯಕ್ಷರಾದ ಪುಷ್ಪರಾಜ್ ಹೆಗಡೆ ತಿಳಿಸಿದರು. ಆಟಿಡೊಂಜಿ ದಿನದ ಪ್ರಯುಕ್ತ ಸಾಂಸ್ಕೃತಿಕ ಸಂಭ್ರಮ ಆಯೋಜಿಸಲಾಗಿತ್ತು. ಆಟಿಯ ಖಾದ್ಯಗಳಾದ ಪತ್ರೊಡೆ ಶಾವಿಗೆ ಹಾಲು ದೀಗುಜ್ಜೆ ಪೋಡಿ ಹುರುಳಿ ಚಟ್ನಿ ಹಲಸಿನ ಸೊಳೆಪಲ್ಯ ತಿಮರೆ ಚಟ್ನಿ ಅರ್ತಿಕಾಯಿ ಚಟ್ನಿ ರಚ್ಚ ಚಟ್ನಿ ಬೂಜೆ ಚಟ್ನಿ ಬಾಳೆದಿಂಡು ಪಲ್ಯ ನುಗ್ಗೆ ಸೊಪ್ಪು ಪಲ್ಯ ತಜಂಕ್ ಪಲ್ಯ ಅರಿಶಿಣ ಎಲೆ ಕಟ್ಟಿ ಮುಂತಾದವುಗಳನ್ನು ವಿದ್ಯಾರ್ಥಿಗಳು ಬಾಳೆ ಎಲೆಯಲ್ಲಿ ಸವಿದರು. ಒಟ್ಟಾರೆ ದಿನಾಚರಣೆಯೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಇದೇ ಸಮಯದಲ್ಲಿ ರೋಟರಿ ಕ್ಲಬ್ ಬಂಟ್ವಾಳ ಇವರ ವತಿಯಿಂದ ಲಕ್ಷ ವ್ರಕ್ಷಾಂದೋಲನ ಅಂಗವಾಗಿ ವಿದ್ಯಾರ್ಥಿಗಳಿಗೆ ಸಸಿ ವಿತರಣೆ ನಡೆಸಲಾಯಿತು.