ನಾವೂರು ಗ್ರಾ.ಪಂ.ನ ನೂತನ ಅಧ್ಯಕ್ಷರಾಗಿ ಇಂದಿರಾ ಕನಪಾದೆ, ಉಪಾಧ್ಯಕ್ಷರಾಗಿ ನಾರಾಯಣ ಆಯ್ಕೆ
ಬಂಟ್ವಾಳ : ತಾಲೂಕಿನ ನಾವೂರು ಗ್ರಾ.ಪಂ.ನ ಎರಡನೆ ಅವಧಿಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯೆ ಇಂದಿರಾ ಕನಪಾದೆ ಹಾಗೂ ಉಪಾಧ್ಯಕ್ಷರಾಗಿ ನಾರಾಯಣ ದೇವಸ್ಯಪಡೂರು ಅವರು ಆಯ್ಕೆಯಾಗಿದ್ದಾರೆ.
ಶುಕ್ರವಾರ ಗ್ರಾ.ಪಂ.ನ ಕಚೇರಿ ಸಭಾಭವನದಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಸಮಾಜಕಲ್ಯಾಣಾಧಿಕಾರಿ ಸುನೀತಾ ಅವರು ನಡೆಸಿದರು.ಗ್ರಾ.ಪಂ.ಪಿಡಿಒ ಸಹಕರಿಸಿದರು.
ಈ ಹಿಂದಿನ ಎರಡು ವರ್ಷ ನಾವೂರು ಗ್ರಾ.ಪಂ.ನ ಆಡಳಿತ ಕಾಂಗ್ರೆಸ್ ಬೆಂಬಲಿತರ ತೆಕ್ಕೆಯಲ್ಲಿತ್ತು.ಆಗ 9 ಮಂದಿ ಸದಸ್ಯರು ಕಾಂಗ್ರೆಸ್ ಬೆಂಬಲಿತರಿದ್ದು,7 ಮಂದಿ ಬಿಜೆಪಿ ಬೆಂಬಲಿತ ಸದಸ್ಯರಿದ್ದರು.
ಇತ್ತೀಚೆಗೆ ನಡೆದ ಗ್ರಾ.ಪಂ.ನ ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯ ಜಯಗಳಿಸಿದ್ದರೆ, ಮತ್ತೋರ್ವ ಸದಸ್ಯ ಕೆಲ ಸಮಯದ ಹಿಂದೆಯೇ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.ಹಾಗಾಗಿ ಬಿಜೆಪಿ ಬೆಂಬಲಿತರ ಸಂಖ್ಯೆ 9 ಕ್ಕೆರಿದ್ದರಿಂದ ಅನಾಯಾಸವಾಗಿ ಎರಡನೇ ಅವಧಿಯ ಆಡಳಿತ ಬಿಜೆಪಿ ಬೆಂಬಲಿತರ ಪಾಲಾಗಿದೆ.