ಆಗಸ್ಟ್ 13 ರಂದು ಉಮಾಶಿವ ದೇವಸ್ಥಾನದ ವಠಾರದಲ್ಲಿ ಅಖಂಡ ಭಾರತ ಸಂಕಲ್ಪದಿನ ವಾಹನ ಜಾಥಾ
ಬಂಟ್ವಾಳ: ಹಿಂದು ಜಾಗರಣ ವೇದಿಕೆ ವಿಟ್ಲ ತಾಲೂಕು ಇದರ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪದಿನವಾಹನ ಜಾಥಾ ಮತ್ತು ಸಭಾ ಕಾರ್ಯಕ್ರಮ ಆಗಸ್ಟ್ 13 ರಂದು ಸಂಜೆ 4 ಗಂಟೆಗೆ ಕಲ್ಲಡ್ಕ ಗೇರುಕಟ್ಟೆ ಉಮಾಶಿವ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.
ಇದಕ್ಕು ಮೊದಲು ಮಧ್ಯಾಹ್ನ 2-30 ಕ್ಕೆ ಮಾಣಿ ಶ್ರೀ ರಾಜರಾಜೇಶ್ವರೀ ಭಜನಾ ಮಂದಿರ, ಮೆಲ್ಕಾರ್ ರಾಮದೇವ ಸಭಾಭವನ, ವೀರಕಂಭ ಶಾರದ ಭಖನಾ ಮಂದಿರದ ಬಳಿಯಿಂದ ಏಕಕಾಲಕ್ಕೆ ವಾಹನ ಜಾಥಾ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಬಳಿಕ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀರಾಮಾಂಜನೇಯ ಸೇವಾ ಟ್ರಸ್ಟ್ ಶ್ರೀರಾಮ ಮಂದಿರ, ಕಲ್ಲಡ್ಕ ಇದರ ಕಾರ್ಯದರ್ಶಿ ನಾಗೇಶ ಕಲ್ಲಡ್ಕ ವಹಿಸಲಿದ್ದಾರೆ.
ವಿಶ್ವ ಹಿಂದೂ ಪರಿಷದ್ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ರಘು ಸಕಲೇಶಪುರ ದಿಕ್ಕೂಚಿ ಭಾಷಣ ಮಾಡಲಿದ್ದು,ಮಾದಕಟ್ಟೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಸಮಿತಿಅಧ್ಯಕ್ಷಗೋಪಾಲಕೃಷ್ಣ ಭಟ್ ಮಾದಕಟ್ಟೆ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ