ಸಿವಿಲ್ ಕಂಟ್ರಾಕ್ಟರ್ಸ್ ಅಸೊಶಿಯೇಶನ್ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ
ಮಂಗಳೂರು : ಸಿವಿಲ್ ಕಂಟ್ರಾಕ್ಟರ್ಸ್ ಅಸೊಶಿಯೇಶನ್ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಗರೋಡಿ ಮುಂಭಾಗದ ಸಮ್ರಧ್ಧಿ ಸಭಾಭವನದಲ್ಲಿ ಆಗಸ್ಟ್ ೬ ರ ಭಾನುವಾರ ನಡೆಯಿತು .ಸುಮಾರು ಹದಿನಾಲ್ಕು ವರ್ಷಗಳ ಹಿಂದೆ ಸ್ಥಾಪನೆಯಾದ ಸಿವಿಲ್ ಕಂಟ್ರಾಕ್ಟರ್ಸ್ ಅಸೊಶಿಯೇಶನ್ ಈ ವರ್ಷ ಪ್ರಥಮ ಬಾರಿಗೆ ಆಟಿಡೊಂಜಿ ದಿನ ಎಂಬ ತುಳುನಾಡಿನ ಸಾಂಪ್ರದಾಯಿಕ ಆಚರಣೆ ಯನ್ನು ಅಸೊಶಿಯೇಶನ್ ತಮ್ಮ ಕುಟುಂಬದ ಸದಸ್ಯರೊಂದಿಗೆ ಸರಳವಾಗಿ ಆಚರಿಸಿತು.

ಅಸೊಶಿಯೇಶನ್ ಸದಸ್ಯರ ಮನೆಯಲ್ಲಿಯೇ ತಯಾರಿಸಿದ ಸುಮಾರು ೪೦ಕ್ಕಿಂತಲೂ ಹೆಚ್ಚು ಬಗೆಯ ತುಳುನಾಡಿನ ಸಾಂಪ್ರದಾಯಿಕ ತಿಂಡಿ ತಿನಸುಗಳನ್ನು ಕಾರ್ಯಕ್ರಮದ ಆಹ್ವಾನಿತರಿಗೆ ಬಡಿಸಲಾಯಿತು.
ಇವುಗಳಲ್ಲಿ ತಿಮರೆ ಚಟ್ನಿ, ತಜಂಕ್ ಚಟ್ನಿ, ಕುಕ್ಕುದ ಚಿಟ್ನಿ, ನುರ್ಗೆ ಸೊಪ್ಪು ಪಲ್ಯ, ಪದ್ಪೆ ಸೊಪ್ಪು ಪಲ್ಯ, ರೆಚ್ಚೆದ ಚಟ್ನಿ, ಉಪ್ಪಡ್ ಪಚ್ಚಿಲ್, ಕಣಿಲೆ ಕಜಿಪು, ಪತ್ತೊಳಿ ಪತ್ರೊಡೆ, ಕೊಟ್ಟಿಗೆ, ಗಾರಿಗೆ, ಮೂಡೆ, ಸೇಮೆದ ಅಡ್ಡೆ, ಕಲ್ತಪ್ಪ, ತೇಟ್ಲಾ ಪದೆಂಜಿ ಗಸಿ, ಅರೆಪು ಪುಂಡಿ, ಮರ್ವಾಯಿ ಪುಂಡಿ, ಪುಂಡಿಗಸಿ ಮೊದಲಾದ ತುಳುನಾಡಿನ ತಿಂಡಿಗಳು ನೆರದಿದ್ದ ಜನರ ಬಾಯಲ್ಲಿ ನೀರೂರಿಸುವಂತೆ ಮಾಡಿತು.
ವೇದಿಕೆಯ ಮುಂಬಾಗದಲ್ಲಿ ತುಳುನಾಡಿನ ಮನೆಗಳಲ್ಲಿ ಉಪಯೋಗಿಸುತ್ತಿದ್ದ ಹಳೆಯ ವಸ್ತುಗಳು, ಪಾತ್ರೆಗಳು, ಪೀಟೋಪಕರಣಗಳು, ಕೃಷಿ ಪರಿಕರಗಳು ಹಾಗೂ ಇನ್ನಿತರ ವಸ್ತುಗಳ ಪ್ರದರ್ಶನವೂ ಆಕರ್ಷಣೀಯವಾಗಿತ್ತು.
ಆಟಿಡೊಂಜಿ ದಿನ ಕಾರ್ಯಕ್ರಮದ ಉದ್ಘಾಟನೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಮಹಾಬಲ.ಎಮ್ ಅವರು ನೆರವೇರಿಸಿದರು,
ಬಳಿಕ ಮಾತನಾಡಿದ ಅವರು ತುಳುನಾಡಿನ ಭವ್ಯ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿರುವುದಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದ.ಕ ಜಿಲ್ಲಾ ಕೊಟ್ಟಾರಿ ಸಮಾಜ ಸುಧಾರಕ ಸಂಘದ ಮುಖ್ಯ ಕಾರ್ಯದರ್ಶಿಯವರಾದ ಶ್ರೀ. ತಾರನಾಥ ಕೊಟ್ಟಾರಿ ಸಭೆಯನ್ನುದ್ದೇಶಿಸಿ ತುಳುನಾಡಿನ ಆಟಿ ತಿಂಗಳ ಮಹತ್ವ ಮತ್ತು ಸಂಸ್ಕೃತಿ ಪರಂಪರೆಯ ಮಾಹಿತಿಯನ್ನೊದಗಿಸಿದರು.
ಉಪಾಧ್ಯಕ್ಷರಾದ ಶ್ರೀ. ಸತೀಶ್ಕುಮಾರ್ ಜೋಗಿ ಸ್ವಾಗತಿಸಿದರು. ಕಾರ್ಯದರ್ಶಿ ದೇನಾನಂದ ವಂದಿಸಿದರು.
ಈ ಸಂಧರ್ಭ ಸದಸ್ಯರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಆಟಿಕಳಂಜ ವೇಷಭೂಷಣವನ್ನು ಪ್ರದರ್ಶಿಸಲಾಯಿತು.
ಉಪಾಧ್ಯಕ್ಷ ರಾದ ದಿನಕರ್ ಸುವರ್ಣ, ಕೋಶಾಧಿಕಾರಿ ಸುರೇಶ್. ಜೆ, ಅಶೋಕ್ ಕುಲಾಲ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕು! ವಾರಿಣಿ ನಿರೂಪಿಸಿದರು.