ಶ್ರೀ ಕ್ಷೇತ್ರ ಕೊರಗಜ್ಜನ ಸಾನಿದ್ಯಕ್ಕೆ ಖ್ಯಾತ ಚಿತ್ರನಟಿ ಮಾಲಾಶ್ರಿ ಭೇಟಿ
ಮಂಗಳೂರು: ಕೊರಗಜ್ಜನ ಮೂಲಸ್ತಾನ ದೆಕ್ಕಾಡು ಕುತ್ತಾರು ಶ್ರೀ ಕೊರಗಜ್ಜನ ಕ್ಷೇತ್ರಕ್ಕೆ ಖ್ಯಾತ ಚಿತ್ರನಟಿ ಮಾಲಾಶ್ರಿ ತನ್ನ ಮಕ್ಕಳೊಂದಿಗೆ ಭೇಟಿ ನೀಡಿ ಗಂಧ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಎಜೆ ಹಾಸ್ಪಿಟಲ್ ಪ್ರಶಾಂತ್ ಶೆಟ್ಟಿ, ಶ್ರೀ ಕೊರಗಜ್ಜ ಕ್ಷೇತ್ರದ ಟ್ರಸ್ಟಿಗಳಾದ ಪ್ರೀತಮ್ ಶೆಟ್ಟಿ ಮಾಗಂದಡಿ ಕುತ್ತಾರು, ದೇವಿಪ್ರಸಾದ್ ಶೆಟ್ಟಿ ಮಾಗಂದಡಿ, ವಿದ್ಯಾಚರಣ್ ಭಂಡಾರಿ ಮೊಗರುಗುತ್ತು ಮತ್ತಿತರರು ಇದ್ದರು.