ಬಂಟ್ವಾಳ: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ೩೬ ವರ್ಷ ಕರ್ತವ್ಯ ನಿರ್ವಹಿಸಿ ಬಿ.ಸಿ.ರೋಡ್ ಘಟಕದಲ್ಲಿ ಸಹಾಯಕ ಅಧಿಕಾರಿಯಾಗಿ ನಿವೃತ್ತಿ ಹೊಂದಿದ ರಮೇಶ್ ಶೆಟ್ಟಿ ವಾಮದಪದವು ಅವರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮ ಬಿ.ಸಿ.ರೋಡ್ ನ ಕಚೇರಿಯಲ್ಲಿ ನಡೆಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅವರು ಮುಖ್ಯಅತಿಥಿಯಾಗಿ ಭಾಗವಹಿಸಿ ರಮೇಶ್ ಶೆಟ್ಟಿ ಅವರನ್ನು ಸನ್ಮಾಾನಿಸಿ ಶುಭ ಹಾರೈಸಿದರು.

ರಮೇಶ್ ಶೆಟ್ಟಿ ಅವರು ಸನ್ಮಾನ ಕ್ಕೆ ಪ್ರತಿಕ್ರಿಯಿಸಿ, ಕರ್ತವ್ಯ ನಿರ್ವಹಣೆಗೆ ಸಹಕರಿಸಿದ ಸಹೋದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಮಾಜಿ ಶಾಸಕಿ ಶಕುಂತಲಾ ಶೆಟ್ಟಿ,ನಿವೃತ್ತ ಹಿರಿಯ ವಿಭಾಗೀಯ ನಿಯಂತ್ರಣಾಽಕಾರಿ ಪಿ.ರಾಜಶೇಖರ್, ನಿವೃತ್ತ ವಿಭಾಗೀಯ ನಿಯಂತ್ರಣಾಽಕಾರಿ ನಾಗರಾಜ ಶಿಶಿಲ, ಬಿ.ಸಿ.ರೋಡ್ ಘಟಕ ವ್ಯವಸ್ಥಾಪಕ ಶ್ರೀಷ ಭಟ್, ಪುತ್ತೂರು ಘಟಕ ವ್ಯವಸ್ಥಾಪಕ ಪಿ.ಇಸ್ಮಾಯಿಲ್, ಪುತ್ತೂರು ವಿಭಾಗೀಯ ಸಂಚಲನಾಽಕಾರಿ ಮುರಳೀಧರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಭಾಸ್ಕರ್ ಪ್ರಾರ್ಥಿಸಿದರು. ಶ್ರೀಷ ಭಟ್ ಸ್ವಾಗತಿಸಿದರು.ಗಣೇಶ್ ಪೈ ವಂದಿಸಿದರು. ದಾಮೋದರ ಮತ್ತು ವಾಸಪ್ಪ ಕಾರ್ಯಕ್ರಮ ನಿರೂಪಿಸಿದರು.
