ತುಂಬೆ ವೆಂಟೆಡ್ ಡ್ಯಾಮ್ ಸಂತ್ರಸ್ತರ ನಿಯೋಗದಿಂದ ಮೇಯರ್,ಆಯುಕ್ತರ ಭೇಟಿ
ಬಂಟ್ವಾಳ: ತುಂಬೆ ವೆಂಟೆಡ್ ಡ್ಯಾಮ್ ಸಂತ್ರಸ್ತರ ನಿಯೋಗ ಗುರುವಾರ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಜಯಾನಂದ ಅಂಚನ್ ಹಾಗೂ ಆಯುಕ್ತರಾದ ಆನಂದ ಸಿ.ಎಲ್ ಅವರನ್ನು ಭೇಟಿಯಾಗಿ ವಿವಿಧ ಬೇಡಿಕೆಯ ಮನವಿ ಸಲ್ಲಿಸಿತು.

ಜಿಲ್ಲಾ ರೈತ ಸಂಘ ಅಧ್ಯಕ್ಷ ಶ್ರೀಧರ್ ಶೆಟ್ಟಿ ಬೈಲಗುತ್ತು, ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿ ಕಂಬಳಗುತ್ತು, ಬಂಟ್ವಾಳ ತಾಲೂಕು ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್ ,ಕಾರ್ಯದರ್ಶಿ ಎನ್. ಕೆ ಇದ್ದಿನಬ್ಬ ನೇತೃತ್ವದ ನಿಯೋಗ ಮೇಯರ್ ಹಾಗೂ ಆಯುಕ್ತರನ್ನು ಭೇಟಿಯಾಗಿ ತುಂಬೆ ಡ್ಯಾಮ್ ಸಂತ್ರಸ್ತ ರೈತರಿಗೆ ವರತೆ ಪ್ರದೇಶಕ್ಕೆ ಸೂಕ್ತ ಪರಿಹಾರ ದೊರೆಯದಿರುವುದು ಹಾಗೂ ಭೂ ಸವಕಳಿಗೆ ಶಾಶ್ವತ ತಡೆಗೋಡೆ ನಿರ್ಮಿಸಿ ಕೊಡುವಂತೆ ಒತ್ತಾಯಿಸಿ ಲಿಖಿತ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಮೇಯರ್ ಹಾಗೂ ಆಯುಕ್ತರು ರೈತರಿಗೆ ನ್ಯಾಯ ಒದಗಿಸಿಕೊಡುವ ಭರವಸೆ ನೀಡಿದರು. ನಿಯೋಗದಲ್ಲಿ ರೈತರಾದ ಭಾಸ್ಕರ್ , ದೇವಕಿ,ಸವಿತಾ,ಲೋಕಯ್ಯ, ಮೊಯಿದಿನಬ್ಬ,ಆನಂದ ಶೆಟ್ಟಿ, ರಮೇಶ್ ಭಂಡಾರಿ,ಗಂಗಾಧರ, ಸೋಮಶೇಖರ ಮಯ್ಯ ಮೊದಲಾದವರಿದ್ದರು