ರಂಗೇಲು ಅಂಗನವಾಡಿಯಲ್ಲಿ ಸ್ತನ್ಯಪಾನ ಸಪ್ತಾಹ ಆಚರಣೆ
ಬಂಟ್ವಾಳ: ಎ.ಜೆ ಸಮುದಾಯ ವಿಭಾಗ ಮೂಳೂರು ಮತ್ತು ರಂಗೇಲು ಅಂಗನವಾಡಿ ಇವರ ಸಹಯೋಗದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಿಸಲಾಯಿತು. ಕಾರ್ಯಕ್ರಮವನ್ನು ಡಾ. ಜಯಮಾಲ ಅವರು ಉದ್ಘಾಟಿಸಿ ಮಾತನಾಡಿ, ತಾಯಿ ಹಾಲು ಅಮೃತ ಸಮಾನ ಹಾಗೂ ಅದು ಮೊದಲ ಲಸಿಕೆಯಾಗಿದ್ದು, ಎಲ್ಲಾ ತಾಯಂದಿರು ತಮ್ಮ ಹಾಲುಣಿಸುವ ಪ್ರಕ್ರಿಯೆಯಿಂದ ಮಕ್ಕಳನ್ನು ಸಧೃಢಗೊಳಿಸಿ, ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.
ಡಾ.ಮಾಜಿರ ಸ್ತನ್ಯಪಾನ ಲಾಭಗಳು ವಿಧಾನ, ಡಾ.ಕುಮಾರಸ್ವಾಮಿ ಪೂರಕ ಆಹಾರದ ಮಹತ್ವ ವಿವರಿಸಿದರು. ಡಾ.ಶ್ರೀಶಾನಂದ ಅವರು ಹಾಲುಣಿಸುವ ತಾಯಂದಿರ ಆಹಾರದ ಮಹತ್ವದ ಬಗ್ಗೆ ವಿವರಿಸಿದರು.
ಆರೋಗ್ಯವಂತ ಶಿಶು ಸ್ಪರ್ಧೆ ಕಾರ್ಯಕ್ರಮವನ್ನು ಡಾ.ಮಹಾಲಸ ನಡೆಸಿದರು. ಸುಮಾರು ೩೦ಕ್ಕೂ ಹೆಚ್ಚು ಮಕ್ಕಳು ಮತ್ತು ತಾಯಂದಿರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಂಗನವಾಡಿ ಕಾರ್ಯಕರ್ತೆ ಬಬಿತಾ, ಆಶಾ ಕಾರ್ಯಕರ್ತೆ ಜ್ಯೋತಿ ಲಕ್ಷ್ಮೀ ವಂದಿಸಿದರು. ಎ.ಜೆ.ಯ ಶೂಶ್ರುಷಕಿ ಮೀನಾಕ್ಷಿ ಉಪಸ್ಥಿತರಿದ್ದರು.