ಬಂಟ್ವಾಳ: ಪ್ಲಾಸ್ಟಿಕ್ ಮುಕ್ತ ಅಭಿಯಾನದ ಪ್ರಯುಕ್ತ ಬೀದಿನಾಟಕ ಪ್ರದರ್ಶನ
ಬಂಟ್ವಾಳ: ಇಲ್ಲಿನ ಪುರಸಭೆಯ ವತಿಯಿಂದ ಪ್ಲಾಸ್ಟಿಕ್ ಮುಕ್ತ ಅಭಿಯಾನದ ಅಂಗವಾಗಿ ವಿದ್ಯಾರ್ಥಿ ಸಮೂಹಕ್ಕೆ ಜಾಗೃತಿ ಮೂಡಿಸುವ ಬೀದಿನಾಟಕ ಪ್ರದರ್ಶನ ಪುರಸಭಾ ವ್ಯಾಪ್ತಿಯ ವಿವಿಧೆಡೆಗಳಲ್ಲಿ ನಡೆಯಿತು.ರಂಗಕಲಾವಿದ ಮೌನೇಶ ವಿಶ್ವಕರ್ಮ ನೇತೃತ್ವದ ಸಂಸಾರ ಜೋಡುಮಾರ್ಗ ಕಲಾತಂಡದ ಕಲಾವಿದರು, ಬಿ.ಮೂಡ ಪದವಿ ಪೂರ್ವ ಕಾಲೇಜು, ಅಜ್ಜಿಬೆಟ್ಟು ಸರ್ಕಾರಿ ಪ್ರೌಢಶಾಲೆ ಹಾಗೂ ಬಂಟ್ವಾಳ ಪಾಲೆಟೆಕ್ನಿಕ್ ಕಾಲೇಜು ಆವರಣದಲ್ಲಿ ಜಾಗೃತಿ ಬೀದಿನಾಟಕವನ್ನು ಪ್ರದರ್ಶಿಸಿದರು.
ಬಿಮೂಡ ಸರ್ಕಾರಿಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಯೂಸುಫ್ ವಿಟ್ಲ ಅವರು ತಮ್ಕಿ ಬಾರಿಸುವ ಮೂಲಕ ಬೀದಿನಾಟಕಕ್ಕೆ ಚಾಲಬೆ ನೀಡಿದರು. ಪುರಸಭಾ ಹಿರಿಯ ಆರೋಗ್ಯ ನಿರೀಕ್ಷಕ ರತ್ನಪ್ರಸಾದ್ , ಮೇಲ್ವಿಚಾರಕ ಶಿವಕುಮಾರ್ ಉಪಸ್ಥಿತರಿದ್ದರು.
ಕಸ ಇದು ಕೇವಲ ಕಸವಾಗದೆ ರಕ್ಕಸನಂತೆ ಎಲ್ಲೆಡೆ ವ್ಯಾಪಿಸಿದ್ದು, ತ್ಯಾಜ್ಯ ನಿರ್ವಹಣೆ ಸ್ಥಳೀಯಾಡಳಿತ ಸಂಸ್ಥೆಗಳಿಗೆ ತಲೆನೋವಾಗಿದೆ. ಆದರೆ ಹಸಿ ಕಸ, ಒಣ ಕಸ ದ ಪರಿಕಲ್ಪನೆಯಲ್ಲಿ ತ್ಯಾಜ್ಯವನ್ನು ವಿಂಗಡಿಸಬೇಕು,ಅಪಾಯಕಾರಿ ಪ್ಲಾಸ್ಟಿಕ್ ನ ಬಳಕೆಯನ್ನು ಕಡಿಮೆ ಮಾಡುವುದು, ಮರುಬಳಕೆ ಮಾಡುವುದು, ಪ್ಲಾಸ್ಟಿಕ್ ಬಳಕೆಯನ್ನು ವಿರೋಧಿಸುವ ಮೂರು ಸೂತ್ರಗಳನ್ನು ನಾಟಕದಮೂಲಕ ತಿಳಿಸಲಾಯಿತು. ಪ್ಲಾಸ್ಟಿಕ್ ಪ್ರಾಣಿಗಳಿಗೂ ಅಪಾಯ ತರುತ್ತದೆ ಎನ್ನುವ ಬಗ್ಗೆ ಎಂದೂ ಬಾರದ ಮಳೆ ರೂಪಕ ಪ್ರದರ್ಶಿಸಲಾಯಿತು. ಹಾಡು,ನೃತ್ಯ,ಅಭಿನಯದ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು. ಬಿಮೂಡ ಕಾಲೇಜಿನ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮನಿರ್ವಹಿಸಿದರು. ಸಂಸಾರ ಕಲಾವಿದರಾದ ಮೌನೇಶ ವಿಶ್ವಕರ್ಮ ರಾಕೇಶ್ ಆಚಾರ್ಯ, ಪೃಥ್ವಿರಾಜ್, ರಮೇಶ್ ಕೆ.ಪುಣಚ, ಚಂದ್ರಮೌಳಿ, ರಕ್ಷಿತ್ ವಾಮದಪದವು, ಭಾಗವಹಿಸಿದ್ದರು.