ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರಿ ಸಂಘಕ್ಕೆ 49,69,910-94 ರೂ. ಲಾಭ: ರವೀಂದ್ರ ಕಂಬಳಿ
ಬಂಟ್ವಾಳ: ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರಿ ಸಂಘ ಲಿ. ೨೦೨೨-೨೩ ಸಾಲಿನಲ್ಲಿ ಯಂತ್ರೋಪಕರಣಗಳ ಹಾಗೂ ಬ್ಯಾಂಕಿಂಗ್ ವ್ಯವಹಾರ ಸೇರಿ ಒಟ್ಟು 51 ಕೋಟಿ ರೂ.ವಿಗೂ ಮಿಕ್ಕಿ ವ್ಯವಹಾರ ನಡೆಸಿ 49,69,910-94 ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷರಾದ ಕೆ. ರವೀಂದ್ರ ಕಂಬಳಿಯವರು ತಿಳಿಸಿದ್ದಾರೆ.

ಮಂಗಳೂರಿನ ಶಾಂತಿ ನಿಲಯದಲ್ಲಿ ಸೋಮವಾರ ನಡೆದ ಸಂಘದ 2022-23 ಸಾಲಿನ ವಾರ್ಷಿಕ ಮಹಾಸಭೆಯ ಅಧ್ತಕ್ಷತೆ ವಹಿಸಿ ಮಾತನಾಡಿದ ಅವರು ಸದಸ್ಯರಿಗೆ ಶೇ. 9 ಡಿವಿಡೆಂಟ್ ನ್ನು ಈ ಸಂದರ್ಭದಲ್ಲಿ ಘೋಷಿಸಿದರು.
ಮುಂದಿನ 10 ದಿನಗಳ ವರೆಗೆ ಯಂತ್ರೋಪಕರಣಗಳ ದರದ ಮೇಲೆ ಶೇ.5 ಹಾಗೂ ಬಿಡಿಭಾಗಗಳ ದರದ ಮೇಲೆ ಶೇ.10 ಕಡಿತವನ್ನು ಮಾಡಲು ಸಂಘ ನಿರ್ಧರಿಸಿದೆ ಎಂದರು.
ಸಂಘದ ಉಪಾಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ. ನಿರ್ದೇಶಕರುಗಳಾದ ಎಸ್. ರಾಜು ಪೂಜಾರಿ, ಮೋನಪ್ಪ ಶೆಟ್ಟಿ ಎಕ್ಕಾರು, ಯನ್. ಎ. ರವಿ ಬಸಪ್ಪ,ಸೀತಾರಾಮ ರೈ, ಭಾಸ್ಕರ. ಎಸ್. ಕೋಟ್ಯಾನ್, ಎಸ್.ಬಿ., ಜಯರಾಮ ರೈ, ಜಯರಾಮ ಈ.ಸಿ, ಕರುಣಾಕರ ಶೆಟ್ಟಿ.ಬಿ, ಕೃಷ್ಣಯ್ಯ ಮೂಲೆತೋಟ, ಏನ್. ರಾಜಶೇಖರ ಜೈನ್, ಜಯಶಂಕರ ಬಾಸ್ರಿತ್ತಾಯ,ಜಿ. ತಿಮ್ಮ ಪೂಜಾರಿ, ಗಣೇಶ್. ಎ, ಪೂವಪ್ಪ. ಎ, ಕೆ. ನೀಲಪ್ಪ ನಾಯ್ಕ್, ಹೇಮಾವತಿ, ಶಾರದಾ ಭಾಗವತ್ ಉಪಸ್ಥಿತರಿದ್ದರು.ಸಂಘದ ಮುಖ್ಯ ಕಾರ್ಯನಿರ್ವಹಣಾದಿಕಾರಿ ಪ್ರೇಮರಾಜ್ ಭಂಡಾರಿ ಅವರು ಲೆಕ್ಕಪತ್ರ ಮಂಡಿಸಿದರು.