Published On: Mon, Jul 31st, 2023

ಕಲ್ಲಡ್ಕ ಝಮಾನ್ ಬಾಯ್ಸ್ ವತಿಯಿಂದ ರಕ್ತದಾನ ಶಿಬಿರ

ಬಂಟ್ವಾಳ : ಕಲ್ಲಡ್ಕ ಝಮಾನ್ ಬಾಯ್ಸ್ ಇದರ ಆಶ್ರಯದಲ್ಲಿ ಬ್ಲಡ್‌ ಡೋನರ್ಸ್ ಮಂಗಳೂರು,   ಫಾದರ್ ಮುಲ್ಲರ್ ಆಸ್ಪತ್ರೆ ಮಂಗಳೂರು ಹಾಗೂ ಯೆನೆಪೋಯ ಆಸ್ಪತ್ರೆ ಮಂಗಳೂರು ಇವುಗಳ ಸಹಕಾರದೊಂದಿಗೆ ದಿವಂಗತ ಬಿ.ಕೆ ಇದ್ದಿನಬ್ಬ ಕಲ್ಲಡ್ಕ ಇವರ ಸ್ಮರಣಾರ್ಥ ಕಲ್ಲಡ್ಕ  ಗಂಗಾಧರ ಸಂಕೀರ್ಣದಲ್ಲಿ  ಸೌಹಾರ್ಧ ರಕ್ತದಾನ ಶಿಬಿರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ  ನಡೆಯಿತು.

ಮಾಜಿ ಸಚಿವ ಬಿ. ರಮಾನಾಥ ರೈ ಅತಿಥಿಯಾಗಿ ಮಾತನಾಡಿ ಮನುಷ್ಯನ ರಕ್ತವು ಇನ್ನೊಂದು ಜೀವವನ್ನು ಉಳಿಸಲು ಬಳಕೆಯಾಗಬೇಕೇ ವಿನಃ ರಸ್ತೆಯಲ್ಲಿ ಚೆಲ್ಲುವಂತಾಗಬಾರದು, ರಕ್ತದ ಅವಶ್ಯಕತೆ ಬಂದಾಗ ಯಾರೂ ಯಾವ ಜಾತಿ, ಧರ್ಮ, ಪಂಗಡದವನ ರಕ್ತ ಎಂಬುದನ್ನು ನೋಡುವುದಿಲ್ಲವೋ, ಇದೇ ಮನೋಸ್ಥಿತಿಯನ್ನು ನೈಜ ಜೀವನದಲ್ಲಿ ಅಳವಡಿಸಿಕೊಂಡು ಬದುಕಿದಾಗ ಭಾರತದ ಭವ್ಯ ಜಾತ್ಯಾತೀತ ಪರಂಪರೆಗೆ ಶಕ್ತಿ ತುಂಬಲಿದೆ ಎಂದರು.


ಶಿಬಿರವನ್ನು ಕಲ್ಲಡ್ಕ ಮುಹಿಯದ್ದೀನ್ ಜುಮಾ ಮಸೀದಿ ಮುದರ್ರಿಸ್ ಉಸ್ಮಾನ್ ದಾರಿಮಿ,ಉದ್ಘಾಟಿಸಿದರು,  ಇರ್ಶಾದ್ ದಾರಿಮಿ ಅಲ್ ಜಝರಿ ಶುಭ ಹಾರೈಸಿದರು. ಝಮಾನ್ ಬಾಯ್ಸ್ ಅಧ್ಯಕ್ಷ ಮಹಮ್ಮದ್ ಸಜ್ಜಾದ್ ಅಧ್ಯಕ್ಷತೆ ವಹಿಸಿದ್ದರು.


ಸಂಕೀರ್ಣದ ಮಾಲಕ ಶಾಂತರಾಮ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಸ್.ಡಿ.ಪಿ.ಐ. ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮಹಮ್ಮದ್ ತುಂಬೆ, ಮಂಗಳೂರು ಬ್ಲಡ್‌ ಡೋನರ್ಸ್ ಅಧ್ಯಕ್ಷ ನವಾಝ್ ನರಿಂಗಾನ, ಗೋಳ್ತಮಜಲು ಹಜಾಜ್ ಸಮೂಹ ಸಂಸ್ಥೆಯ ಪಾಲುದಾರ ಇಮ್ತಿಯಾಝ್, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಪದ್ಮನಾಭ ರೈ, ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ, ಮಂಗಳೂರು ತಾಲೂಕು ಪಂಚಾಯತ್ ಮಾಜಿ ಸದಸ್ಯ ಬಿ.ಕೆ.ಜಬ್ಬಾರ್ ಬೋಳಿಯಾರ್, ಗೋಳ್ತಮಜಲು ಗ್ರಾಮ ಪಂಚಾಯತ್ ಸದಸ್ಯ ಇಕ್ಬಾಲ್ ಕೆ.ಸಿ.ರೋಡ್, ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಅತಿಥಿಗಳಾಗಿ ಭಾಗವಹಿಸಿದ್ದರು.


ಇದೇ ವೇಳೆ ಶಾಂತರಾಮ ಶೆಟ್ಟಿ, ಸಾಹುಲ್ ಹಮೀದ್ ಕಾಶಿಪಟ್ನ ಹಾಗೂ ಡಾ.ಸಮ್ರೀನಾ,  ಅವರನ್ನು ಸನ್ಮಾನಿಸಲಾಯಿತು. ಶಿಬಿರದಲ್ಲಿ 241 ಮಂದಿ ರಕ್ತದಾನ ಮಾಡಿದರು.

ಕಲ್ಲಡ್ಕ ಮೆಸ್ಕಾಂ ಶಾಖಾಧಿಕಾರಿ ಮಹಾಬಲ, ಬ್ಲಡ್ ಡೋನರ್ಸ್  ಗೌರವಾಧ್ಯಕ್ಷ ಸಿದ್ದೀಕ್ ಮಂಜೇಶ್ವರ, ಉದ್ಯಮಿಗಳಾದ ಜಿ.ಎಸ್.ಸಿದ್ದೀಕ್ ಕಲ್ಲಡ್ಕ, ನವಾಝ್ ಕೆ.ಎನ್, ಬಿ.ಕೆ.ಫೈರೋಝುದ್ದೀನ್ ಬಿ.ಕೆ ನಗರ, ಕೆ.ಎಸ್.ಫೈರೋಝ್ ಕಲ್ಲಡ್ಕ, ಶಾಫಿ ಕಲ್ಲಡ್ಕ , ಎಸ್.ಆರ್. ರಫೀಕ್ ಗೋಳ್ತಮಜಲು, ವಿಟ್ಲ ಪಡ್ನೂರು ಗ್ರಾ.ಪಂ.ಮಾಜಿ ಸದಸ್ಯ ಸಿದ್ದೀಕ್ ಸರವು, ಕಾಂಗ್ರೆಸ್ ಸೇವಾದಳ ಜಿಲ್ಲಾ ಕಾರ್ಯದರ್ಶಿ ವೆಂಕಪ್ಪ ಪೂಜಾರಿ ಮೊದಲಾದವರು ಭಾಗವಹಿಸಿದ್ದರು
ಇರ್ಫಾನ್ ಕಲ್ಲಡ್ಕ ಸ್ವಾಗತಿಸಿ, ಫಾರೂಕ್ ಎಫ್ ತ್ರೀ ವಂದಿಸಿದರು. ಪತ್ರಕರ್ತ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter