ಸಂಪೂರ್ಣರಾಮಾಯಣ ನೃತ್ಯ ಕಾರ್ಯಕ್ರಮ
ಬಂಟ್ವಾಳ: ಮರೆಯಲಾಗದ ಭಾವ ಸೃಷ್ಟಿಯ ಸಂಪೂರ್ಣ ರಾಮಾಯಣ ನಿರತ ಆಪ್ತ ರಂಗಮನೆ ವೇದಿಕೆ, ಮೆಲ್ಕಾರ್‌ನಲ್ಲಿ ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯ ಗುರುಗಳಾದ ವಿದ್ವಾನ್ ಬಿ.ದೀಪಕ್ ಕುಮಾರ್ ಹಾಗೂ ವಿದುಷಿ ಪ್ರೀತಿಕಲಾ ಇವರಿಂದ ಸಂಪೂರ್ಣ ರಾಮಾಯಣ ನೃತ್ಯ ಕಾರ್ಯಕ್ರಮ ನಡೆಯಿತು.
ರಾಮಾಯಣದ ಆರಂಭದಿಂದ ಕೊನೆಯವರೆಗಿನ ಪ್ರಮುಖ ದೃಶ್ಯಗಳನ್ನು ನಿರೂಪಿಸುತ್ತಾ ತ್ರೇತಾಯುಗದ ದಿನಗಳನ್ನು ಅತ್ಯಂತ ಸುಂದರವಾಗಿ ಪ್ರಸ್ತುತಪಡಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಸುಧಾ ಕಶೆಕೋಡಿ ಅವರು ನೆರವೇರಿಸಿ ಮಾತನಾಡಿ, ಸಂಸ್ಕಾರಭರಿತ ಕಾರ್ಯಕ್ರಮಗಳು ಈ ರೀತಿಯಲ್ಲಿ ಸಾಕಾರಗೊಳ್ಳುವ ಮೂಲಕ ನಾಡು ಸಾಂಸ್ಕೃತಿಕವಾಗಿ ಸಂಪದ್ಭರಿತವಾಗುವುದು. ಈ ಮೂಲಕ ನಿರಂತರವಾಗಿ ತೊಡಗಿಸಿಕೊಳ್ಳುತ್ತಿರುವ ನೃತ್ಯ ದಂಪತಿಗಳ ಕಾರ್ಯಕ್ಕೆ ಹಾಗೂ ನಿರತ ರಂಗಮನೆಯ ಮಧುಸೂದನ್ ಹಾಗೂ ತೇಜಸ್ವಿ ಅಂಬೆಕಲ್ಲು ಇವರ ಯೋಜನೆಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸ್ವರೂಪ ಅಧ್ಯಯನ ಕೇಂದ್ರದ ಶ್ರೀ ಗೋಪಾಡ್ಕರ್ ಇವರು ಸ್ವರೂಪದ ಮಕ್ಕಳ ಮೂಲಕ ಪರಿಚಯಿಸಿ, ದರು. ತೇಜಸ್ವಿ ಅಂಬೆಕಲ್ಲು ಇವರು ಕಾರ್ಯಕ್ರಮದ ನಿರೂಪಣೆಗೈದರು.