ಲೊರೆಟ್ಟೋ: ರಸ್ತೆಗೆ ಉರುಳಿ ಬಿದ್ದ ಮುರ ಕಲ್ಲು ಬಂಡೆ ಗ್ರಾಮ ಪಂಚಾಯಿತಿ ವತಿಯಿಂದ ತೆರವು ಕಾರ್ಯಾಚರಣೆ
ಬಂಟ್ವಾಳ:ಇಲ್ಲಿನ ಬಂಟ್ವಾಳ -ಮೂಡುಬಿದ್ರೆ ಮುಖ್ಯರಸ್ತೆ ನಡುವಿನ ಲೊರೆಟ್ಟೋ-ಮಹಲ್ ತೋಟ ಸಂಪರ್ಕ ರಸ್ತೆಗೆ ಗುಡ್ಡದಿಂದ ಬೃಹತ್ ಗಾತ್ರದ ಮುರ ಕಲ್ಲಿನ ಬಂಡೆಯೊAದು ಬುಧವಾರ ಬೆಳಿಗ್ಗೆ ಉರುಳಿ ಬಿದ್ದ ಘಟನೆ ನಡೆದಿದೆ. ಇದರಿಂದಾಗಿ ಸ್ಥಳೀಯ ವಿದ್ಯಾರ್ಥಿಗಳು ಮತ್ತು ಪಾದಚಾರಿಗಳಿಗೆ ಸೇರಿದಂತೆ ವಾಹನ ಸಂಚಾರಕ್ಕೆ ಕೆಲಹೊತ್ತು ಅಡ್ಡಿಯಾಗಿದೆ.

ಬೇಸಿಗೆಯಲ್ಲಿ ಜೆಸಿಬಿ ಮೂಲಕ ರಸ್ತೆ ಮೇಲಿನ ಮಣ್ಣು ಅಗೆದ ಪರಿಣಾಮ ಇದೀಗ ಸುರಿಯುತ್ತಿರುವ ನಿರಂತರ ಮಳೆಗೆ ಮಣ್ಣು ಸಡಿಲಗೊಂಡು ಬಂಡೆ ಉರುಳಿ ಬಿದ್ದಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅಮ್ಟಾಡಿ ಗ್ರಾಮ ಪಂಚಾಯತಿ ವತಿಯಿಂದ ಕ್ರಷರ್ ಮೂಲಕ ಬಂಡೆ ಕಲ್ಲು ಒಡೆದು ತೆರವುಗೊಳಿಸುವ ಕಾರ್ಯಾಚರಣೆ ನಡೆಯಿತು ಎಂದು ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್ ಪ್ರತಿಕ್ರಿಯಿಸಿದ್ದಾರೆ.