ಬಿ.ಸಿ.ರೋಡು: ಹಿರಿಯ ಉದ್ಯಮಿ ಅಣ್ಣಪ್ಪ ಬಂಗೇರ ನಿಧನ
ಬಂಟ್ವಾಳ: ಇಲ್ಲಿನ ಕೊಳ್ನಾಡು ಗ್ರಾಮದ ಕಾಡುಮಠ ನಿವಾಸಿ, ಬಿ.ಸಿ.ರೋಡು ಹಿರಿಯ ಉದ್ಯಮಿ ಅಣ್ಣಪ್ಪ ಬಂಗೇರ (72) ಇವರು ಅಸೌಖ್ಯದಿಂದ ಬುಧವಾರ ಸಂಜೆ ತುಂಬೆ ಖಾಸಗಿ ಆಸ್ಪತ್ರೆ ಯಲ್ಲಿ ನಿಧನರಾದರು.

ಮೃತರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ. ಬಿ.ಸಿ.ರೋಡು ಸಮೀಪದ ಕೈಕಂಬದಲ್ಲಿ ಕಳೆದ ಐದು ದಶಕಗಳಿಂದ ಶ್ರೀ ಗಣೇಶ್ ಎಲೆಕ್ಟ್ರಿಕಲ್ಸ್ ಸಂಸ್ಥೆ ನಡೆಸುತ್ತಿದ್ದ ಇವರು ಹಿರಿಯ ವಿದ್ಯುತ್ ಗುತ್ತಿಗೆದಾರ ರಾಗಿದ್ದರು. ಕಾಡುಮಠ ಸರ್ಕಾರಿ ಪ್ರೌಢಶಾಲೆ ಸಂಸ್ಥಾಪಕರಾಗಿ, ಕೊಡುಗೈ ದಾನಿಯಾಗಿ, ವಿವಿಧ ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಮೃತರ ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ 11.30 ಗಂಟೆಗೆ ಸ್ವಗೃಹ ಬಳಿ ನೆರವೇರಲಿದೆ.