Published On: Wed, Jul 26th, 2023

ಅರಳ: ಗುಡ್ಡದ ಮಣ್ಣು ಕುಸಿತ ತಡೆಗೋಡೆ ಕಾಮಗಾರಿಗೆ ಹಾನಿ

ಬಂಟ್ವಾಳ:
ಇಲ್ಲಿನ ಅರಳ ಗ್ರಾಮದ ದೆಂಬುಡೆ ಎಂಬಲ್ಲಿ ಗುಡ್ಡದ ಮಣ್ಣು ಕುಸಿದು ತಡೆಗೋಡೆ ಕಾಮಗಾರಿಗೆ ಹಾನಿ ಉಂಟಾದ ಘಟನೆ ಬುಧವಾರ ನಡೆದಿದೆ. ಸ್ಥಳೀಯ ನಿವಾಸಿ ರುಡಾಲ್ಫ್ ಮಾರ್ಕ್ ಲೋಬೋ ಎಂಬವರ ಮನೆ ಬಳಿ ಈ ಘಟನೆ ನಡೆದಿದ್ದು, ಇವರಿಗೆ ಅಪಾಯದ ಭೀತಿ ಎದುರಾಗಿದೆ. ಕಳೆದ ವರ್ಷ ಇದೇ ಸ್ಥಳದಲ್ಲಿ ಗುಡ್ಡ ಕುಸಿದು ಮನೆ ಮಂದಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತಗೊಂಡಿದ್ದರು.

ಇದರಿಂದಾಗಿ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲಾಗಿದ್ದು, ಈ ಬಾರಿ ಗುಡ್ಡದ ಮಣ್ಣು ಮತ್ತು ಬಂಡೆಯೂ ತಡೆಗೋಡೆ ಮೇಲೆ ಕುಸಿದು ಬಿದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter