ಪುದು: ಗ್ರಾಮ ಪಂಚಾಯಿತಿ ತೆರವುಗೊಂಡ ಒಂದು ಸ್ಥಾನ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವು
ಬಂಟ್ವಾಳ:ಇಲ್ಲಿನ ಪುದು ಗ್ರಾಮ ಪಂಚಾಯಿತಿನಲ್ಲಿ ತೆರವುಗೊಂಡ ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಹಮ್ಮದ್ ಇಕ್ಬಾಲ್ ಪಾಡಿ ಇವರು ಗೆಲುವು ದಾಖಲಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಉಮ್ಮರ್ ಫಾರೂಕ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಅಧ್ಯಕ್ಷೆ ರಶಿದಾ ಬಾನು, ಉಪಾಧ್ಯಕ್ಷ ಇಕ್ಬಾಲ್ ಸಜೀರು, ಸದಸ್ಯೆ ರೆಹನಾ, ವಲಯ ಕಾಂಗ್ರೆಸ್ ಅಧ್ಯಕ್ಷ ದಿಲ್ ಶಾನ್ ಪೇರಿಮಾರ್, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ತೌಸೀಫ್ ವಳಚ್ಚಿಲ್, ಮುಡಿಪು ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮಜೀದ್ ಪೆರಿಮಾರ್, ಪ್ರಮುಖರಾದ ಹಕೀಂ ಮಾರಿಪಳ್ಳ, ಕರೀಂ ಮಾರಿಪಳ್ಳ, ಫಯಾಜ್ ಮಾರಿಪಳ್ಳ, ಇರ್ಶಾದ್ ಪಾಡಿ, ಇಬ್ರಾಹಿಂ ಮಾರಿಪಳ್ಳ, ಘಣಿ ಮಾರಿಪಳ್ಳ, ಐ.ಎಸ್.ಇಮ್ರಾನ್, ಸಲೀಂ ಮಲ್ಲಿ ಮತ್ತಿತರರು ಸಂಭ್ರಮಾಚರಣೆ ನಡೆಸಿದರು.