ಪುದು ಗ್ರಾ.ಪಂ.ಒಂದು ಸ್ಥಾನಕ್ಕೆ ಉಪಚುನಾವಣೆ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯ ಗೆಲುವು
ಬಂಟ್ವಾಳ: ಪುದು ಗ್ರಾಮ ಪಂಚಾಯಿತ್ ಒಂದು ಸ್ಥಾನಕ್ಕೆ ಭಾನುವಾರ ನಡೆದ ಉಪಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮೊಹಮ್ಮದ್ ಇಕ್ಬಾಲ್ ಪಾಡಿ ಅವರು ಗೆಲುವು ಸಾಧಿಸಿದ್ದಾರೆ.
ಸದಸ್ಯ ಹುಸೈನ್ ಎಂ.ಅವರ ನಿಧನದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆದಿತ್ತು. ಒಂದು ಸ್ಥಾನಕ್ಕೆ ಮೂವರು ಅಭ್ಯರ್ಥಿಗಳು ಕಣದಲ್ಲಿದ್ದರು.ನಿಧನರಾದ ಸದಸ್ಯ ಹುಸೈನ್ ಅವರ ಪುತ್ರ ಮೊಹಮ್ಮದ್ ಇಕ್ಬಾಲ್ ಪಾಡಿ ಅವರು 385 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. 8 ಮತಗಳು ತಿರಸ್ಕೃತಗೊಂಡಿದೆ. ಒಟ್ಟು 572 ಮತಗಳು ಚಲಾವಣೆಯಾಗಿತ್ತು.
ಬಂಟ್ವಾಳ ತಹಶೀಲ್ದಾರ್ ಎಸ್.ಬಿ.ಕೂಡಲಗಿ ನೇತೃತ್ವದಲ್ಲಿ ಚುನಾವಣೆ ಅಧಿಕಾರಿಯಾಗಿದ್ದ ತಾ.ಪಂ.ಇಒ ರಾಜಣ್ಣ ಅವರ ಸಮಕ್ಷಮದಲ್ಲಿ ಮತ ಎಣಿಕೆ ನಡೆಯಿತು. ಪುದು ಗ್ರಾಮ ಪಂಚಾಯತ್ ಪಿಡಿಒ ಹರೀಶ್ ಕೆ.ಎ, ಉಪತಹಶೀಲ್ದಾರ್ ನವೀನ್ ಬೆಂಜನಪದವು,ಸಿಬ್ಬಂದಿಗಳಾದ ಸೀತಾರಾಮ ಕಮ್ಮಾಜೆ, ಜೆ.ಜನಾರ್ದನ ಕಂದಾಯ ನಿರೀಕ್ಷಕರು ಶ್ರೀ ಕಲಾ ಸುಂದರ,ಕಿರಣ್,ಚಂದು ಸಹಕರಿಸಿದರು.