ಗ್ರಾಮೋತ್ಸವದ ಪ್ರಯುಕ್ತ ವಿಷ ಜಂತುಗಳ ಹಾಗೂ ಅರೋಗ್ಯ ಮಾಹಿತಿ ಶಿಬಿರ
ಬಂಟ್ವಾಳ: ಒಡಿಯೂರು ಶ್ರೀ ಚಾರಿಟೇಬಲ್ ಟ್ರಸ್ಟ್ (ರಿ), ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಕಲ್ಲಡ್ಕ ವಲಯದ ಶಂಭೂರು ಘಟಕದ ವತಿಯಿಂದ ಒಡಿಯೂರು ಶ್ರೀ ಗಳ ಜಯಂತ್ಯುತ್ಸವದ ಪ್ರಯುಕ್ತ ಗ್ರಾಮೋತ್ಸವದ ಅಂಗವಾಗಿ ವಿಷ ಜಂತುಗಳ ಹಾಗೂ ಅರೋಗ್ಯ ಮಾಹಿತಿ ಶಿಬಿರವು ಶಂಭೂರು ಶ್ರೀ ರಾಮಾಂಜನೇಯ ವ್ಯಾಯಮ ಶಾಲೆಯಲ್ಲಿ ನಡೆಯಿತು.

ವಿಷ ಜಂತುಗಳ ಬಗ್ಗೆ ಸ್ನೇಕ್ ಕಿರಣ್ ಅರೋಗ್ಯ ಮಾಹಿತಿಯನ್ನು ಡಾ.ಸುಕೇಶ್ ಕೊಟ್ಟಾರಿ ಅಡ್ಲ ಅವರು ಮಾಹಿತಿ ನೀಡಿದರು. ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆಯ ಆಡಳಿತ ಸಮಿತಿ ಅಧ್ಯಕ್ಷರಾದ ಆನಂದ ಎ.ಶಂಭೂರು ಅಧ್ಯಕ್ಷತೆ ವಹಿಸಿದರು. ನರಿಕೊಂಬು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪ್ರಕಾಶ್ ಮಾಡಿಮುಗೇರು, ಕಲ್ಲಡ್ಕ ವಲಯ ಸಂಯೋಜಕಿ ಜಯಲಕ್ಷ್ಮಿ ಪ್ರಭು,ಬೆಳ್ತಂಗಡಿ, ಬಂಟ್ವಾಳ ತಾಲೂಕು ಮೇಲ್ವಿಚಾರಕರಾದ ಯಶೋಧರ ಸಾಲಿಯಾನ್, ಶಂಭೂರು ಘಟಕದ ಅಧ್ಯಕ್ಷರಾದ ಸುಶಾನ್ ನೀರಪಾದೆ, ಸೇವಾದೀಕ್ಷೆತೆ ಸುನೀತಾ ಅನಂತ್ತಾಡಿ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.