ಎರಡು ಕೃತಿಗಳ ಲೋಕಾರ್ಪಣೆ
ಬಂಟ್ವಾಳ: ಬೇರೆ ಬೇರೆ ಭಾಷೆಗಳಿಂದ ಕನ್ನಡ ಭಾಷೆಗೆ ಕೃತಿಗಳ ಅನುವಾದ ಇನ್ನಷ್ಟು ಆಗಬೇಕಾಗಿದೆ. ಆಗ ಜ್ಞಾನ ವಿಸ್ತಾರವನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ವೈದ್ಯಕೀಯ, ವೈಜ್ಞಾನಿಕ ಬರಹಗಳನ್ನು ಭಾಷಾಂತರದ ಮೂಲಕ ಪರಸ್ಪರ ಹಂಚಿಕೊಳ್ಳುವುದರಿಂದ ಸಾಹಿತ್ಯ, ಸಂಸ್ಕೃತಿ ಮತ್ತು ಭಾಷಾ ಸಂಬಂಧಗಳ ಬೆಸುಗೆ ಸಾಧ್ಯವಿದೆ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ.ಶ್ರೀನಾಥ್ ಹೇಳಿದರು.
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ನಡೆದ ರಾಜಗೋಪಾಲ ಕನ್ಯಾನ ಅವರ ಸಂಪಾದಿತ ಅನುವಾದಿತ ಕೃತಿ “ಮಲಯಾಳಿ ವಿಷ ವೈದ್ಯ” ಹಾಗೂ ಕೆ.ಟಿ. ರೈ ವಿಟ್ಲ ಮತ್ತು ರಾಜಗೋಪಾಲ ಕನ್ಯಾನ ಅವರು ಜಂಟಿ ಯಾಗಿ ಸಂಪಾದಿಸಿದ ಕೆದಂಬಾಡಿ ಜತ್ತಪ್ಪ ರೈ ಅವರ ಅನುವಾದಿತ “ತುಳು ಗೀತಾಂಜಲಿ” ಎಂಬ ಕೃತಿಗಳನ್ನು ಲೋಕರ್ಪಣೆಗೊಳಿಸಿ ಅವರು ಮಾತನಾಡಿದರು.
ಬಂಟ್ವಾಳ ತಾಲೂಕು ಕಸಾಪ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿದ್ದ ಉಪನ್ಯಾಸಕ ಅಜಕ್ಕಳ ಗಿರೀಶ್ ಭಟ್ ಅವರು ಕೆದಂಬಾಡಿ ತಿಮ್ಮಪ್ಪ ರೈ ವಿಟ್ಲ ‘ತುಳು ಗೀತಾಂಜಲಿ’ಯ ಕೃತಿಯ ಕುರಿತು ಹಾಗೂ ಜಿಡ್ಡು ಗಣಪತಿ ಭಟ್ ಅವರು “ಮಲಯಾಳಿ ವಿಷ ವೈದ್ಯ’ ಕೃತಿಯ ಕುರಿತಾಗಿ ಮಾತನಾಡಿದರು.
ಕೃತಿಯ ಸಂಪಾದಕ ರಾಜಗೋಪಾಲ ಕನ್ಯಾನ ಕೃತಿ ಪ್ರಕಟಣೆಯ ಕುರಿತು ಮಾತನಾಡಿದರು. ತಾಲೂಕು ಕಸಾಪ ಗೌರವ ಕಾರ್ಯದರ್ಶಿಗಳಾದ ಬಿ.ಸು.ಭಟ್, ರಮಾನಂದ ನೂಜಿಪಾಡಿ ಉಪಸ್ಥಿತರಿದ್ದರು.
ಬಂಟ್ವಾಳ ತಾಲೂಕು ಕ.ಸಾ.ಪ.ದ ಸಂಘಟನಾ ಕಾರ್ಯದರ್ಶಿ ಜಯರಾಮ ಪಡ್ರೆ ಸ್ವಾಗತಿಸಿದರು. ಇನ್ನೋರ್ವ ಸಂಘಟನಾ ಕಾರ್ಯದರ್ಶಿ ದಾಮೋದರ ಏರ್ಯ ವಂದಿಸಿದರು. ಗೌರವ ಕೋಶಾಧ್ಯಕ್ಷ ಅಬ್ದುಲ್ ರಹಿಮಾನ್ ಡಿ.ಬಿ.ಕಾರ್ಯಕ್ರಮ ನಿರೂಪಿಸಿದರು. ಅಬೂಬಕ್ಕರ್ ಅಮ್ಮುಂಜೆ ನಾಡಗೀತೆ ಹಾಡಿದರು.
ಇದಕ್ಕು ಮೊದಲು ಜಿಲ್ಲೆಯ ಪ್ರಸಿದ್ದ
ಕಲಾವಿದರ ಕೂಡುವಿಕೆಯಲ್ಲಿ “ಉಲೂಪಿ ವಿವಾಹ’ ಎಂಬ ಯಕ್ಷಗಾನ ತಾಳಮದ್ದಳೆ ಸಂಪನ್ನಗೊಂಡಿತು.