ಬಂಟ್ವಾಳ: ಮಳೆಗೆ ಮುಂದುವರಿದ ಹಾನಿ
ಬಂಟ್ವಾಳ: ತಾಲೂಕಿನಲ್ಲಿ ಸುರಿಯುತ್ತಿರುವ ಮಳೆ ಹಾಗೂ ಗಾಳಿಗೆ ಹಾನಿಯು ಮುಂದುವರಿದಿದ್ದು, ಅಪಾರ ಪ್ರಮಾಣದ ನಷ್ಟವು ಉಂಟಾಗಿದೆ.
ತಾಲೂಕಿನ ಸಾಲೆತ್ತೂರು ಗ್ರಾಮದ ಬೊಳ್ಮಾರ್ ಎಂಬಲ್ಲಿ ಕಮಲ ರವರ ಮನೆ ಭಾಗಶ: ಹಾನಿಯಾಗಿರುತ್ತದೆ.

ವಿಟ್ಲ ಹೋಬಳಿಯ ಅಳಿಕೆ ಎಂಬಲ್ಲಿ ರಾಮ ಬೆಲ್ಚಡ ಅವರ ಮನೆ ಮೇಲೆ ಮರ ಬಿದ್ದು, ಭಾಗಶಃ ಹಾನಿಯಾಗಿದ್ದು, ಇದನ್ನು ತೆರವುಗೊಳಿಸಲಾಗಿದ್ದು ಯಾವುದೇ ಅಪಾಯ ಸಂಭವಿಸಿಲ್ಲ.ಹಾಗೆಯೇ ಇದೇ ಗ್ರಾಮದ ವದ್ವ ಗೋಪಾಲ ಕೃಷ್ಣ ನಾವುಡ ಅವರ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದ್ದು, ಯಾವುದೇ ಪ್ರಾಣ ಹಾನಿಯಿಲ್ಲ.

ಬಾಳ್ತಿಲ ಗ್ರಾಮದ ಅರಿಮಜಲು ಎಂಬಲ್ಲಿ ಸುಂದರಿ ಎಂಬವರ ಮನೆಯ ಪಕ್ಕದ ಬರೆ ಜರಿದು ಮನೆಗೆ ಆಂಶಿಕ ಹಾನಿಯಾಗಿರುತ್ತದೆ.ಯಾವುದೇ ಜೀವ ಹಾನಿಯಾಗಿರುವುದಿಲ್ಲ.

ವಿಟ್ಲ ಕಸಬಾ ಗ್ರಾಮದ ಅವೆತ್ತಿ ಕಲ್ಲು ಎಂಬಲ್ಲಿನ ಶ್ರೀ ಚಂದ್ರಶೇಖರ ಗೌಡ ಅವರ ಮನೆ ಮೇಲೆ ಅಡಿಕೆ ಮರ ಬಿದ್ದು ಭಾಗಶ: ಹಾನಿಯಾಗಿದೆ. ದೇವಸ್ಯಪಡೂರು ಗ್ರಾಮದ ಮಾಲಬೆ ಎಂಬಲ್ಲಿ ಪುಷ್ಪ ಎಂಬವರ ಮನೆಗೆ ಮರ ಬಿದ್ದು ಮೇಲ್ಛಾವಣಿ ಭಾಗಶಃ ಹಾನಿಯಾಗಿದೆ..
ಕಡೇಶಿವಾಲಯ ಗ್ರಾಮದಲ್ಲಿ ವೆಂಕಪ್ಪ ಮೂಲ್ಯ ರವರ ಮನೆ ಮೇಲೆ ಮರ ಬಿದ್ದಿದ್ದು ಭಾಗಶಃ ಹಾನಿಯಾಗಿದೆ.
: ಬಿ.ಮೂಡ ಗ್ರಾಮದ ಬಿಫಾತಿಮ ರವರ ಮನೆ ಮೇಲೆ ಮರ ಬಿದ್ದು ಬಾಗಶ: ಹಾನಿಯಾಗಿದೆ. ಮೂಡುಪಡಕೊಡಿ ಗ್ರಾಮದ ಸೇವಾ ಎಂಬಲ್ಲಿರುವ ವಿನುತಾ ಅವರ ಮನೆಗೆ ಗುಡ್ಡಜರಿದು ಮನೆಗೆ ಭಾಗಶಃ ಹಾನಿಯಾಗಿರುತ್ತದೆ ಎಂದು ತಾಲೂಕಾಡಳಿತದ ಪ್ರಕಟಣೆ ತಿಳಿಸಿದರ.