ಪುದು ಗ್ರಾ.ಪಂ.ನ ಒಂದು ಸ್ಥಾನಕ್ಕೆ ಉಪಚುನಾವಣೆ ಶೇ.68.92 ಮತದಾನ
ಬಂಟ್ವಾಳ :ಪುದು ಗ್ರಾ.ಪಂ.ನ ಒಂದು ಸದಸ್ಯ ಸ್ಥಾನಕ್ಕೆ ಭಾನುವಾರ ಮಳೆಯ ನಡುವೆ ಮತದಾನ ಪ್ರಕ್ರಿಯೆಗಳು ನಡೆಯಿತು.

ಬಂಟ್ವಾಳ ತಾಲೂಕಿನ ಮಂಗಳೂರು ಕ್ಷೇತ್ರದ ಪುದು ಗ್ರಾಮಪಂಚಾಯತ್ ನಲ್ಲಿ ಸದಸ್ಯರಾಗಿದ್ದ ಹುಸೈನ್ ಅವರು ನಿಧನರಾದ ಹಿನ್ನೆಲೆಯಲ್ಲಿ ಈ ಉಪಚುನಾವಣೆ ನಡೆಯಿತು.
ಇಲ್ಲಿ 414 ಪುರುಷರು, 416 ಮಹಿಳೆಯರು ಸೇರಿ ಒಟ್ಟು 830 ಮತದಾರರಿದ್ದು,ಇವರ ಪೈಕಿ 284 ಪುರುಷರು, 288 ಮಹಿಳೆಯರು ಸೇರಿ ಒಟ್ಟು 572 ಮಂದಿ ಮತ ಚಲಾಯಿಸಿದ್ದಾರೆ. ಒಟ್ಟು ಶೇ.68.92 ಮತದಾನವಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಸುಜೀರು (ದಕ್ಷಿಣ ಭಾಗ) ಮತಗಟ್ಟೆಯಲ್ಲಿ ಮತದಾನ ನಡೆಯಿತು. ಜುಲೈ 26 ರಂದು ಮತ ಎಣಿಕೆ ನಡೆಯಲಿದೆ.
ತೆರವಾದ ಒಂದು ಸ್ಥಾನಕ್ಕೆ ಒಟ್ಟು ಮೂರು ಮಂದಿ ಸ್ಪರ್ಧೆಗಿಳಿದಿದ್ದು, ಅಬ್ದುಲ್ ಲತೀಫ್, ಮುಹಮ್ಮದ್ ಅಶ್ರಫ್, ಮೊಹಮ್ಮದ್ ಇಕ್ಬಾಲ್ ನಡುವೆ ಯಾರು ಗೆಲ್ಲುವರು ಎಂಬುದು ಕುತೂಹಲಕಾರಿ