ರಾಜಕೀಯ, ಶೈಕ್ಷಣಿಕ ,ಸಾಮಾಜಿಕವಾಗಿ ನಮ್ಮ ಹಕ್ಕಿಗಾಗಿ ನಾವೇ ಹೋರಾಡಬೇಕು: ಡಾ. ಪ್ರಣವಾನಂದ ಸ್ವಾಮೀಜಿ
ಬಂಟ್ವಾಳ: ಬ್ರಹ್ಮ ಶ್ರೀ ನಾರಾಯಣ ಗುರು ಶಕ್ತಿಪೀಠ, ರಾಷ್ಟ್ರೀಯ ಈಡಿಗ ಬಿಲ್ಲವ ಮಹಾಮಂಡಳಿಯ ಜಂಟಿ ಆಶ್ರಯದಲ್ಲಿ ಪಾಣೆಮಂಗಳೂರು ಮೆಲ್ಕಾರ್ ಬಿರ್ವ ಸೆಂಟರ್ ನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ಒಂದು ದಿನದ ವಿಶೇಷ ಚಿಂತನಾ ಶಿಬಿರವನ್ನು ಕಲಬುರ್ಗಿಯ ಬ್ರಹ್ಮ ಶ್ರೀ ನಾರಾಯಣ ಗುರು ಶಕ್ತಿ ಪೀಠದ ಪೀಠಾಧಿಪತಿ ಡಾ. ಪ್ರಣವಾನಂದ ಸ್ವಾಮೀಜಿ ದೀಪ ಬೆಳಗಿಸಿ ಉದ್ಘಾಟಿಸಿದರು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಕಟ್ಟ ಕಡೆಯ ಬಿಲ್ಲವರ ಮನೆಗೂ ನಮ್ಮ ಚಿಂತನೆಗಳು ತಲುಪಬೇಕು. ರಾಜಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ನಾವು ಬೆಳೆಯಬೇಕು. ನಮ್ಮ ಹಕ್ಕಿಗಾಗಿ ನಾವೇ ಹೋರಾಡಬೇಕು. ಸಮಾಜ ನಿಂತ ನೀರಾಗಬಾರದು, ಹರಿಯುವ ನದಿಯಾಗಬೇಕು. ಆ ಬಗ್ಗೆ ಪ್ರಯತ್ನ, ಯೋಜನೆಗಳು ನಿರಂತರ ನಡೆಯಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ದ. ಕ.ಜಿಲ್ಲಾ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಕೆ. ಸಂಜೀವ ಪೂಜಾರಿ, ಪದ್ಮನಾಭ ಕೋಟ್ಯಾನ್, ಬೇಬಿ ಕುಂದರ್ ಹಾಜರಿದ್ದರು.
ಜಿತೇಂದ್ರ ಜೆ. ಸುವರ್ಣ ಕಾರ್ಯಕ್ರಮದ ಉದ್ದೇಶ ಹಾಗೂ ಧ್ಯೇಯವನ್ನು ವಿವರಿಸಿದರು. ಪ್ರೇಮನಾಥ ಕೆ. ಸ್ವಾಗತಿಸಿದರು. ಕಾರ್ಯಕ್ರಮ ಶಂಕರ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.