ವೀರಕಂಬ ಗ್ರಾ.ಪಂ.ನ ನಿವೃತ್ತ ಬಿಲ್ ಕಲೆಕ್ಟರ್ ಗೆ ಬೀಳ್ಕೊಡುಗೆ
ಬಂಟ್ವಾಳ: ತಾಲೂಕಿನ ವೀರಕಂಬ ಗ್ರಾಮ ಪಂಚಾಯತ್ ನಲ್ಲಿ ಸುದೀರ್ಘ 28 ವರ್ಷಗಳ ಕಾಲ ಬಿಲ್ ಕಲೆಕ್ಟರ್ ಹಾಗೂ ಜವಾನರಾಗಿ ಸೇವೆ ಸಲ್ಲಿಸಿದ ಕೃಷ್ಣಪ್ಪ ಮೂಲ್ಯ ಬೆತ್ತಸರವ್ ಇವರ ವಯೋ ನಿವೃತ್ತಿ ಕಾರಣದಿಂದ ಬೀಳ್ಕೊಡುಗೆ ಕಾರ್ಯಕ್ರಮ ವೀರಕಂಬ ಗ್ರಾಮ ಪಂಚಾಯತಿನಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಅವರು ಸರಳ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷರಾದ ಶೀಲಾ ವೇಗಸ್, ಪಂಚಾಯತ್ ಸದಸ್ಯರಾದ ಜನಾರ್ದನ ಪೂಜಾರಿ, ಅಬ್ದುಲ್ ರೆಹಮಾನ್,ಜಯಂತಿ ಜನಾರ್ಧನ್, ಸಂದೀಪ್, ಜಯಪ್ರಸಾದ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿಶಾಂತ್, ಸಿಬ್ಬಂದಿಗಳಾದ ವಿನುತ, ಮಿಥುನ್, ಚಂದ್ರಹಾಸ, ದಿವ್ಯಮತಿ, ಪಂಚಾಯತ್ ಗ್ರಂಥ ಪಾಲಕಿ ಗೀತಾ ಜಗದೀಶ್, ಪ್ರೇಮ ಆಚಾರ್ಯ , ದಿನೇಶ್ ಆಚಾರ್ಯ ಗಣೇಶ್ ಕೋಡಿ ಮೊದಲಾದವರು ಉಪಸ್ಥಿತರಿದ್ದರು.