Published On: Sat, Jul 1st, 2023

ಏಕರೂಪ ನಾಗರಿಕ ಸಂಹಿತೆ ಕಾನೂನು ಜಾರಿಗೆ ಪ್ರಕಾಶ್ ಅಂಚನ್ ಆಗ್ರಹ

ಬಂಟ್ವಾಳ: ಭಾರತ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಕಾನೂನನ್ನು ಜಾರಿಗೊಳಿಸುವಂತೆ ಸರ್ಕಾರಿ ಶಾಲೆ ಉಳಿಸಿ ಬೆಳಸಿ ರಾಜ್ಯ ಸಮಿತಿ ಅಧ್ಯಕ್ಷರಾದ ಪ್ರಕಾಶ್ ಅಂಚನ್ ಅವರು ಕೇಂದ್ರ ಸರಕಾರವನ್ನು ಮನವಿ ಮೂಲಕ ಆಗ್ರಹಿಸಿದ್ದಾರೆಏಕರೂಪ ನಾಗರಿಕ ಸಂಹಿತೆ ಕಾನೂನು ಜಾರಿ ಕುರಿತಂತೆ ಈಗಾಗಲೇ ಪರ-ವಿರೋಧದ ಚರ್ಚೆ ನಡೆಯುತ್ತಿದ್ದು,ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೆಡ್ಕ‌ರ್‌ ಅವರು ಕೂಡ ಕಾನೂನು ಜಾರಿ ಆಗಬೇಕೆಂದು ಆಗ್ರಹಿಸಿದ್ದರು. ಆ ಸಂದರ್ಭದಲ್ಲೂ ಶೇ. 5 ರಷ್ಟು ಮಂದಿ  ವಿರೋಧಿಸಿದರಿಂದ ಜಾರಿಗೆ  ಅಸಾಧ್ಯವಾಗಿತ್ತು‌ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


  1985 ರಲ್ಲಿ ಸುಪ್ರೀಂ ಕೋರ್ಟ್ ಈ ಕಾನೂನಿನ ಬಗ್ಗೆ ರೂಪು ರೇಷೆಗಳನ್ನು ರಚಿಸುವಂತೆ ಸರ್ಕಾರಕ್ಕೆ ಸೂಚಿಸಿದ್ದು, ಈಗಾಗಲೇ ಗೋವಾದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಲ್ಲಿದೆ. ದೇಶದ ಜನರ ಆಶಯದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು  ದಿಟ್ಟ ನಿರ್ಧಾರದಿಂದ ಏಕರೂಪ ನಾಗರಿಕ ಸಂಹಿತೆ ಜಾರಿಯಾಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.


ಎಲ್ಲಾ ಧರ್ಮದವರು ಒಂದೇ ಕಾನೂನಿನಡಿಯಲ್ಲಿ ಭಾರತದ ಪ್ರಜೆಗಳು, ಪ್ರೀತಿ, ಸಹಭಾಳ್ವೆಯಿಂದ ಬಾಳಬೇಕು. ಈ ಕಾನೂನಿನ ಬಗ್ಗೆ ಅಪಪ್ರಚಾರ ಮಾಡದೆ ಕಾನೂನಿನ ಪರವಾಗಿ  ಸಹಮತವನ್ನು ನೀಡುವಂತೆ ಅವರು ಕೋರಿದ್ದು,  ದೇಶದಲ್ಲಿ ಸರಕಾರಿ ಶಾಲೆ, ಸರಕಾರಿ ಆಸ್ಪತ್ರೆಯನ್ನು ಅಭಿವೃದ್ಧಿಪಡಿಸಿದಾಗ ಕಡ್ಡಾಯವಾಗಿ ಒಂದರಿಂದ ಹನ್ನೆರಡನೇ ತರಗತಿಯವರೆಗೆ  ಮಕ್ಕಳಿಗೆ ಸರಕಾರಿ ಶಾಲೆಯಲ್ಲಿ ಉಚಿತ ಶಿಕ್ಷಣವನ್ನು ನೀಡಬೇಕು, ಇತರ ಗ್ಯಾರಂಟಿಗಳಿಂದ ದೇಶದ ಪ್ರತಿಯೊಂದು ರಾಜ್ಯದಲ್ಲಿ ಬಡವರು ದುಡಿದ ದುಡ್ಡನ್ನು ಖಾಸಗಿ ಶಾಲೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ನೀಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿರುವ  ಮೀಸಲಾತಿಯಿಂದಾಗಿ ಕೆಲವೊಂದು ಸಮುದಾಯದವರು ಯೋಜನೆಯನ್ನು ಪಡೆಯುವಲ್ಲಿ ವಂಚಿತರಾಗಿದ್ದಾರೆ. ಕಟ್ಟ ಕಡೆಯ ಬಡವನಿಗೆ ಈ ದೇಶದ ಬಗ್ಗೆ ಪ್ರೀತಿಯನ್ನು ಮೂಡಿಸುವಲ್ಲಿ  ಕೆಲಸವನ್ನು ಮಾಡಬೇಕಿದೆ. ಒಂದೇ ದೇಶ ಒಂದೇ ಕಾನೂನು, ಒಂದೇ ದೇಶ-ಒಂದೇ ಶಿಕ್ಷಣ, ಪದವಿ ಪೂರ್ವ ಶಿಕ್ಷಣದ ನಂತರ ವಿದ್ಯಾರ್ಥಿಗಳಿಗೆ ಮೆರಿಟ್‌ನ ಆಧಾರದ ಮೇಲೆ ಎಲ್ಲಾ ವರ್ಗದ ಜನರಿಗೆ ಉಚಿತ ಶಿಕ್ಷಣ ಸಿಗುವಂತಾಗಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. .

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter