ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಬಡವರ ಪಾಲಿಗೆ ಆಶಾದಾಯಕ : ರೈ
ಬಂಟ್ವಾಳ: ರಾಜ್ಯ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳು ಬಡವರ ಪಾಲಿಗೆ ಆಶಾದಾಯಕವಾಗಿದ್ದು, ಪಕ್ಷದ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಅರ್ಹ ಫಲಾನುವಿಗಳಿಗೆ ಗ್ಯಾರಂಟಿ ಯೋಜನೆಗಳ ಮಾಹಿತಿಯನ್ನು ನೀಡಿ ಅದರ ಪ್ರಯೋಜನೆಯನ್ನು ಪಡೆಯಲು ಸಹಕರಿಸುವಂತೆ ಮಾಜಿ ಸಚಿವ ರಮಾನಾಥ ರೈ ಕರೆ ನೀಡಿದರು.

ಪಿಲಾತಬೆಟ್ಟು ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ಪ್ರತಿ ಗ್ರಾ.ಪಂ. ಮಟ್ಟದಲ್ಲಿ ಇಂದಿರಾ ಸೇವಾ ಕೇಂದ್ರವನ್ನು ತೆರೆಯುವ ಮೂಲಕ ಸಾರ್ವಜನಿಕರಿಗೆ ಉಚಿತ ಸೇವೆ ನೀಡುವಂತೆ ಸಲಹೆ ನೀಡಿದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಮಾತಾನಾಡಿ ಮುಂಬರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ಲೋಕಸಭಾ ಚುನಾವಣೆಗೆ ತಳಮಟ್ಟದಿಂದ ಪಕ್ಷವನ್ನು ಬಲಿಷ್ಟಗೊಳಿಸಲು ಕಾರ್ಯಕರ್ತರ ಸಹಕಾರ ಅತಿ ಅಗತ್ಯವಾಗಿದೆ ಎಂದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್, ಬಂಟ್ವಾಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಜೋರಾ, ನಿಕಟ ಪೂರ್ವ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಬಾಲಾಜಿ ರಾವ್, ವಲಯ ಕಾಂಗ್ರೆಸ್ ಅಧ್ಯಕ್ಷರಾದ ವಿಕ್ಟರ್ ಡಿಸೋಜ, ಕಾರ್ಯದರ್ಶಿ ರಾಜೇಂದ್ರ ಕೆ.ವಿ, ಬೂತ್ ಅಧ್ಯಕ್ಷರಾದ ಮೋಹನ್ ಸಾಲ್ಯಾನ್, ವಿಠ್ಠಲ್ ಶೆಟ್ಟಿ, ವಸಂತ ಹೆಗಡೆ, ಪಂಚಾಯತ್ ಸದಸ್ಯರಾದ ನೆಲ್ವಿಸ್ಟರ್ ಪಿಂಟೋ, ಲೀಲಾವತಿ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸಿಮಿತಾ ಶೆಟಿ,್ಟ ಯುವ ಕಾಂಗ್ರೆಸ್ ಅಧ್ಯಕ್ಷರಾದ ಗೋಪಾಲ ನೈನಾಡು, ಮುಖಂಡರಾದ ಇಬ್ರ‍್ರಾಹಿಂ ದರ್ವೇಶ್, ವೆಂಕಪ್ಪ ಸಾಲ್ಯಾನ್, ಪ್ರಮೋದ್ ಕುಮಾರ್ ಶೆರಲ್ ಸಿಕ್ವೇರಾ, ಆನಂದ ನೈನಾಡು, ಲಿಲ್ಲಿ ಡಿಸೋಜ, ಸಂತೋಷ್ ಪೂಜಾರಿ, ಅಬ್ರೋಜ್ ಮೋರಸ್, ಲೋರೆನ್ಸ್ ಡಿಸೋಜ, ವಾಲ್ಟರ್ ಪಿಂಟೋ ಉಪಸ್ಥಿತರಿದ್ದರು.