ತುಂಬೆ: ಬಸ್ ತಂಗುದಾಣದ ಉದ್ಘಾಟನೆ
ಬಂಟ್ವಾಳ: ತುಂಬೆ ಗ್ರಾಮವು ಸ್ಮಾಟ್೯ ಸಿಟಿ ಆಗುವಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆ ಹಾಗೂ ಬಿ.ಎ. ಗ್ರೂಪ್‌ನ ಕೊಡುಗೆ ಅಪಾರವಾಗಿದೆ ಎಂದು ತುಂಬೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಬಿ.ಹೇಳಿದರು.
ರಾ.ಹೆ.ಯ ತುಂಬೆಯಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆ ಬಸ್ ತಂಗುದಾಣವನ್ನು ಉದ್ಘಾಟಿಸಿ ಮಾತನಾಡಿದ ಅವರು
ನಾವೆಲ್ಲರು ಪ್ರೀತಿ, ಸಹಬಾಳ್ವೆಯಿಂದ ಕೆಲಸ ಮಾಡುವುದು ಬಹು ಮುಖ್ಯವಾಗಿದೆ ಎಂದು ಹೇಳಿದರು.
ಬಿ.ಎ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಅಬ್ದುಲ್ ಸಲಾಂ, ತುಂಬೆ ಗ್ರಾ.ಪಂ.ಪಿಡಿಒ ಚಂದ್ರಾವತಿ ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ನಿರ್ದೇಶಕರಾದ ಫಾದರ್ ರಿಚ್ಚರ್ಡ್ ಅಲೋಷಿಯಸ್ ಕೊವೆಲ್ಲೋ, ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ಫಾದರ್ ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ, ವೈದ್ಯಕೀಯ ಅಧೀಕ್ಷಕರಾದ ಡಾ. ಕಿರಣ್ ಶೆಟ್ಟಿ, ಗ್ರಾ.ಪಂ.ಸದಸ್ಯ ಮೊಹಮ್ಮದ್ ವಳವೂರು ಉಪಸ್ಥಿತರಿದ್ದರು.
ಜೇಸನ್ ಕರ್ಕಡ ವಂದಿಸಿದರು. ಸುಷ್ಮಾ ಪ್ರಶಾಂತ್ ಕಾರ‍್ಯಕ್ರಮವನ್ನು ನಿರೂಪಿಸಿದರು