ಬಂಟವಾಳದ ಬಂಟರ ಭವನದಲ್ಲಿ ಯೋಗ ದಿನಾಚರಣೆ
ಬಂಟ್ವಾಳ: ವಿಶ್ವ ಯೋಗ ದಿನ ದ ಪ್ರಯುಕ್ತ ಬಂಟ್ವಾಳ ತಾಲೂಕು ಬಂಟರ ಸಂಘ ಮತ್ತು ಶ್ರೀ ಯೋಗನಿಧಿ ಪತಂಜಲಿ ಪ್ರತಿಷ್ಠಾನ( ರಿ ) ಸಹಯೋಗದಲ್ಲಿ ಬ್ರಹ್ಮರಕೊಟ್ಲುವಿನಲ್ಲಿರುವ ಬಂಟವಾಳದ ಬಂಟರ ಭವನದಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ ಜರಗಿತು
ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತುರವರು ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ,
ಯೋಗ ದಿನಾಚರಣೆಗೆ ಮಾತ್ರ ಸೀಮಿತವಾಗದೆ, ದಿನ ನಿತ್ಯ ಯೋಗ್ಯ ರೀತಿಯಲ್ಲಿ ಅಳವಡಿಸಬೇಕು ಆ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣ ವಾಗಬೇಕು ಎಂದು ಹೇಳಿದರು.
ಬಂಟರ ಸಂಘ ಬಂಟ್ವಾಳ ತಾಲೂಕು ಅಧ್ಯಕ್ಷರಾದ ಚಂದ್ರಹಾಸ್ ಡಿ ಶೆಟ್ಟಿ ರವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಜಗನ್ನಾಥ ಚೌಟ , ಜೊತೆ ಕಾರ್ಯದರ್ಶಿ ರಂಜನ್ ಶೆಟ್ಟಿ , ಜತೆ ಕೋಶಾಧಿಕಾರಿ ಪ್ರತಿಭಾ ಎ ರೈ , ಮಹಿಳಾ ವಿಭಾಗದ ಅಧ್ಯಕ್ಷೆ ರಮಾ ಎಸ್ ಭಂಡಾರಿ , ಯುವ ವಿಭಾಗದ ಅಧ್ಯಕ್ಷ ನಿಶಾನ್ ಆಳ್ವ , ಉಪಸ್ಥಿತರಿದ್ದರು
ಯೋಗ ಸಾಧನೆ ಮಾಡಿದ ಪ್ರತಿಮಾ ಹಾಗು ಕ್ರೀಡೆಯಲ್ಲಿ ಸಾಧನೆ ಮಾಡಿದ ಕುಮಾರಿ ನಿಧಿ ಯವರನ್ನು ಈ ಸಂದರ್ಭ ಅಭಿನಂದಿಸಲಾಯಿತು
ಶ್ರೀ ಯೋಗನಿಧಿ ಪತಂಜಲಿ ಪ್ರತಿಷ್ಠಾನ( ರಿ)ದ ಯೋಗ ಗುರುಗಳಾದ ಡಾ ರಘುವೀರ್ ಅವಧಾನಿ ಯೋಗ ದ ಮಾರ್ಗದರ್ಶನ ನೀಡಿದರು , ಅಧ್ಯಕ್ಷರಾದ ಡಾ ಶಿವ ಪ್ರಸಾದ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಸಿದರು , ಜಗನ್ನಾಥ ಚೌಟ ವಂದಿಸಿದರು . ನ್ಯಾಯವಾದಿ ಕೆ ನರೇಂದ್ರ ನಾಥ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು