ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಸಂಜೀವ ಪೂಜಾರಿ
ಬಂಟ್ವಾಳ : ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಸಂಜೀವ ಪೂಜಾರಿ ಗುರುಕೃಪಾ ಆಯ್ಕೆಯಾಗಿದ್ದಾರೆ.
ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದ ಕಛೇರಿಯಲ್ಲಿ ನಡೆದ ಸಂಘದ 2023-25 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಭುವನೇಶ್ ಪಚ್ಚಿನಡ್ಕ( ಉಪಾಧ್ಯಕ್ಷ), ರಮೇಶ್ ಎಮ್.ತುಂಬೆ ( ಪ್ರಧಾನ ಕಾರ್ಯದರ್ಶಿ),ರಾಜೇಶ್ ಸುವರ್ಣ ಮಿತ್ತಬೈಲು ( ಜತೆ ಕಾರ್ಯದರ್ಶಿ) , ಆನಂದ ಸಾಲಿಯಾನ್ ( ಕೋಶಾಧಿಕಾರಿ), ಹೇಮಂತ್ ಕುಮಾರ್ (ಆಂತರಿಕ ಲೆಕ್ಕ ಪರಿಶೋಧಕರು)ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಹಾಗೆಯೇ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸಂಜೀವ ಪೂಜಾರಿ ಕುಚ್ಚಿಗುಡ್ಡೆ,ರಾಮಚಂದ್ರ ಸುವರ್ಣ ತುಂಬೆ, ಗಿರೀಶ್ ಪೂಜಾರಿ ಬಸ್ರ,ರಾಜೇಶ್ ಸುವರ್ಣ ರಾಜಲಕ್ಮೀ,ಗೋಪಾಲಕೃಷ್ಣ ತುಂಬೆ,
ವಾಸು ಪೂಜಾರಿ ಲೊರೆಟ್ಟೋ, ಬೇಬಿ ಕುಂದರ್, ಶೈಲಜಾ ರಾಜೇಶ್, ಗಣೇಶ್ ಪೂಂಜರೆಕೋಡಿ, ಸತೀಶ್ ಬಿ, ತಿಮ್ಮಪ್ಪ ಪೂಜಾರಿ, ಉಮೇಶ್ ಸುವರ್ಣ ತುಂಬೆ,ಜಯಪ್ರಕಾಶ್, ಜೆ.ಎಸ್,ಪ್ರಭಾವತಿ ತುಂಬೆ,ವಿರೇಂದ್ರ ಅಮೀನ್, ಮೋನಪ್ಪ ಮಜಿ, ಪ್ರಶಾಂತ್ ಕೋಟ್ಯಾನ್,ಗೋಪಾಲ ಪೂಜಾರಿ,ಶಂಕರ ಕಾಯರ್‌ಮಾರ್ ಆಯ್ಕೆಯಾಗಿದ್ದಾರೆ.
ಸಂಘದ ಮಾಜಿ ಅಧ್ಯಕ್ಷರಾದ ರಾಮಪ್ಪ ಸುವರ್ಣ,ಹರಿಕೃಷ್ಣ ಬಂಟ್ವಾಳ್,ಚಂದ್ರಶೇಖರ್ ಪೂಜಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶ್ರೀನಿವಾಸ್ ಪೂಜಾರಿ ಮೆಲ್ಕಾರ್ ಚುನಾವಣಾಧಿಕಾರಿಯಾಗಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು