ಬಂಟ್ವಾಳ ಕಾಲೇಜಿನಲ್ಲಿ ಅಂತಾರಾ಼ಷ್ಟ್ರೀಯ ಯೋಗ ದಿನಾಚರಣೆ
ಬಂಟ್ವಾಳ: ದೈಹಿಕ ಮತ್ತು ಮಾನಸಿಕ ಸಧೃಡತೆಗೆ ಯೋಗ ಪ್ರಯೋಜನಕಾರಿ ಎಂದು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಯೋಗವರ್ಧನ್ ಡಿ.ಎಂ. ಹೇಳಿದರು.

ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು ಎನ್‌ಸಿಸಿ ಘಟಕದ ವತಿಯಿಂದ ನಡೆದ ಅಂತಾರಾ಼ಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯೋಗ ಎನ್ನುವುದು ವ್ಯಕ್ತಿಯೊಬ್ಬನ ಒಳಗಿನ ಶಕ್ತಿಯನ್ನು ಒಂದು ಸಂತುಲಿತ ರೀತಿಯಲ್ಲಿ ಸುಧಾರಿಸಲು ಇರುವ ವಿಧಾನ. ಜನ್ಮದಾತ ಮಗುವಿನಿಂದ ಹಿಡಿದು ವಯೋವೃದ್ಧರವರೆಗೆ ಯಾರೂ ರೋಗದಿಂದ ಮುಕ್ತವಾಗಿಲ್ಲ. ವ್ಯಕ್ತಿಯ ಸೌಂದರ್ಯ ಕಾಪಾಡಿಕೊಳ್ಳುವುದರ ಜತೆ ಸಮಾಜವು ರೋಗದತ್ತ ವಾಲುತ್ತಿರುವುದನ್ನು ತಡೆಯುತ್ತದೆ ಎಂದು ಅವರು ಹೇಳಿದರು.
ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುರ್ದಶನ್ ಬಿ., ಸೀನಿಯರ್ ಕೆಡಿಟ್ ಅಂಡರ್ ಆಫೀಸರ್ ರೋಹನ್ ಶೈಲೇಶ್, ಕೆಡೆಟ್ ಅಂಡರ್ ಆಫೀಸರ್ ಆಕಾಶ್ ಸಮಂತ್ ಜಿ. ಉಪಸಿತ್ಥರಿದ್ದರು.
ಕಾರ‍್ಯಕ್ರಮದಲ್ಲಿ ಎನ್‌ಸಿಸಿ ವಿದ್ಯಾರ್ಥಿಗಳಿಗೆ ಕೆಡೆಟ್ ವಿಮಿತಾ ಪಿ. ಯೋಗದ ಪ್ರಾತ್ಯಕ್ಷಿಕೆಯನ್ನು ನೀಡಿದರು.
ಅರ್ಥಶಾಸ್ತ್ರ ಉಪನ್ಯಾಸಕ,ಎನ್‌ಸಿಸಿ ಅಧಿಕಾರಿ ಲೆಪ್ಟಿನೆಂಟ್ ಪ್ರದೀಪ್ ಪೂಜಾರಿ ಸ್ವಾಗತಿಸಿದರು. ಕೆಡೆಟ್ ಅನುಜ್ಞಾ ಜಿ. ಕುಂದರ್ ಪ್ರಾರ್ಥಿಸಿದರು. ಕೆಡೆಟ್ ನಿಖಿತಾ ಕಾರ‍್ಯಕ್ರಮ ನಿರೂಪಿಸಿದರು. ಕೆಡೆಟ್ ಪ್ರಸ್ತೂತಿ ವಂದಿಸಿದರು.