Published On: Wed, Jun 21st, 2023

ಮನಸ್ಸಿನ ಸ್ವಾಸ್ಥ್ಯಕ್ಕೆ ಯೋಗ ಅಗತ್ಯ :ಒಡಿಯೂರು ಶ್ರೀ 

ಬಂಟ್ವಾಳ:  ಜೀವ-ದೇವನ ಸಂಬಂಧ ಯೋಗದಲ್ಲಿದೆ. ಬದುಕನ್ನು ಹೇಗೆ ರೂಪಿಸಬೇಕು ಎನ್ನುವುದನ್ನು ನಾವು ತಿಳಿದುಕೊಳ್ಳುವುದು ಅಗತ್ಯವಿದೆ. ಶಿಸ್ತು ಸ್ವಚ್ಛತೆ ಇದ್ದಲ್ಲಿ ಸದಾಚಾರ ಸಂಪನ್ನತೆಯಾಗುತ್ತದೆ. ಮನಸ್ಸಿನ ಸ್ವಾಸ್ಥ್ಯಕ್ಕೆ ಯೋಗ ಅಗತ್ಯ. ಬಾಲವಿಕಾಸ ವಿದ್ಯಾಸಂಸ್ಥೆ ವ್ಯಕ್ತಿ ವಿಕಾಸದ ಜೊತೆಗೆ ರಾಷ್ಟ್ರ ವಿಕಾಸಕ್ಕೆ ನಾಂದಿಯಾಗಲಿದೆ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.


ಬುಧವಾರ ಮಾಣಿ ಪೆರಾಜೆಯ ವಿದ್ಯಾನಗರದಲ್ಲಿರುವ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪಯುಕ್ತ ಶಾಲೆಯ ದಿ| ಪಾಳ್ಯ ಅನಂತರಾಮ ರೈ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಬಾಲವಿಕಾಸ ಶಿಕ್ಷಣ ಸಂಸ್ಥೆ ಇತರರಿಗೆ ಮಾದರಿಯಾಗಿದೆ. ನಾನು ಎಂಬುದನ್ನು ಬಿಟ್ಟು ನಮ್ಮದು ಎನ್ನುವುದು ನಮ್ಮಲ್ಲಿ ಬರಬೇಕು.  ಸಂಸ್ಥೆಯಿಂದ ಮಕ್ಕಳನ್ನು ಭಾರತ ರಥದ ಸಾರಥಿಯನ್ನಾಗಿ ಮಾಡುವ ಕೆಲಸವಾಗಲಿ. ಮಕ್ಕಳಲ್ಲಿ ಸಂಸ್ಕೃತಿಯ ಬೀಜ ಬಿತ್ತಬೇಕು. ಆಗ ಸದೃಢ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.
ಶಿಸ್ತು- ಸಂಯಮ ಇದ್ದಲ್ಲಿ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ವ್ಯಕ್ತಿ ಯಾಗಲು ಸಾಧ್ಯ. ಸಂಸ್ಥೆ ವಿದ್ಯಾರ್ಥಿಗಳ ಜೀವನಕ್ಕೆ ದಾರಿ ದೀಪವಾಗಲಿ, ವಿದ್ಯಾರ್ಥಿಗಳ ಕನಸು ನನಸಾಗುವ ದಿನ ಈ ಯೋಗ ದಿನವಾಗಲಿ ಒಡಿಯೂರು ಶ್ರೀಗಳು ನುಡಿದರು.
ಯೋಗ ಶಿಕ್ಷಕರಾದ ವಿಜೇಶ್ ಯವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಯೋಗಾಸನಗಳನ್ನು ಪುದರ್ಶಿಸಿದರು .
ಟ್ರಸ್ಟ್ ನ ಉಪಾಧ್ಯಕ್ಷರಾದ ಯತಿರಾಜ್ ಎನ್, ಕಾರ್ಯದರ್ಶಿ ಮಹೇಶ್ ಜೆ ಶೆಟ್ಟಿ, ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಕಸ್ತೂರಿ ಪಿ. ಶೆಟ್ಟಿ, ವೈದ್ಯರಾದ ಮನೋಹರ ರೈ, ಸಂಸ್ಥೆಯ ಹಿತೈಷಿ ಉಗ್ಗಪ್ಪ ಶೆಟ್ಟಿ ಕೊಂಬಿಲ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಾಲವಿಕಾಸ ಟ್ರಸ್ಟ್ ನ ಅಧ್ಯಕ್ಷರಾದ ಪ್ರಹ್ಲಾದ್ ಜೆ. ಶೆಟ್ಟಿ ಹಾಗೂ ಅವರ ಪತ್ನಿ ಸುಜಯ ಪಿ.ಶೆಟ್ಟಿರವರು ಶ್ರೀಗಳನ್ನುಗೌರವಿಸಿದರು.

ಶಾಲಾ ಆಡಳಿತಾಧಿಕಾರಿ ರವೀಂದ್ರ ದರ್ಬೆ, ಸ್ವಾಗತಿಸಿದರು. ಸಹಶಿಕ್ಷಕಿಯರಾದ ಸುಧಾ ಎನ್.ರಾವ್ ಹಾಗೂ ಸುಪ್ರಿಯಾ ಡಿ.ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ವಿ. ಶೆಟ್ಟಿ ವಂದಿಸಿದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter